ಭ್ರೂಣ ಕಾದಂಬರಿ ಪ್ರಾರಂಭ ಆಗೋದು ವಿಶ್ವವಿದ್ಯಾಲಯ ಪ್ರಾಧ್ಯಾಪಕ ಮತ್ತು ವಿಜ್ಞಾನಿಯಾಗಿರುವ ವೆಂಕಿಯ ಜೀವನದ ಮೂಲಕ. ತೀರಿಕೊಂಡ ಹೆಂಡತಿಯ ನೆನಪಿನಲ್ಲಿ ಕುಡಿತಾ ಕಾಲಕಳೆಯುತ್ತಿರುವಾಗ ಅಚಾನಕ್ಕಾಗಿ ಒಂದು ಕಾನ್ಫರೆನ್ಸ್ ಗೆ ಹೋಗುತ್ತಾನೆ. ಅಲ್ಲಿ ಜಾನಕಿ ಹೆಂಡತಿಯ ಪ್ರತಿರೂಪವಾದ ಒಬ್ಬ ಹುಡುಗಿ ನೋಡಿ ಆಶ್ಚರ್ಯ ಚಕಿತನಾಗುತ್ತಾನೆ. ತನ್ನ ಹೆಂಡತಿ ತನಗಾಗಿ ಮತ್ತೆ ಮರುಜನ್ಮ ಪಡೆದಿದ್ದಾಳೆ ಎಂಬ ಭ್ರಮೆಯಿಂದ ಮಗಳ ವಯಸ್ಸಿನ ಹುಡುಗಿಯನ್ನು ಹಿಂಬಾಲಿಸುತ್ತಾನೆ. ಕೊನೆಗೆ ಆ ಹಡಗಿ ತನ್ನ ಮಗಳು ಎಂದು ತಿಳಿದ ನಂತರ ತುಂಬ ಸಂತೋಷ ಪಡುತ್ತಾನೆ. ಆ ಹುಡುಗಿ ಹೇಗೆ ತನ್ನ ಮಗಳು ಎಂಬ ಸತ್ಯವನ್ನು ಕಾದಂಬರಿ ಹೇಳುತ್ತಾ ಹೋಗುತ್ತದೆ. ಬ್ರಾಹ್ಮಣ ಕುಟುಂಬದ ವೆಂಕಿ ಮತ್ತು ಬಂಜಾರ ಸಮುದಾಯದ ಜಾನಕಿಯ ಪ್ರೀತಿಯ ಬಗ್ಗೆ, ವಿವಾಹದ ಬಗ್ಗೆ, ಕಾರ ಅಪಘಾತದಲ್ಲಿ ಜಾನಕಿ 40 ದಿನದ ಗರ್ಭಿಣಿಯ ಭ್ರೂಣ ಹೇಗೆ ಮಕ್ಕಳಿಲ್ಲದ ದಂಪತಿಗೆ ಭ್ರೂಣದ ಕಸಿಮಾಡುವ ವೈದ್ಯಕೀಯ ವ್ಯವಸ್ಥೆಯ, ಜಾನಕಿಯ ಭ್ರೂಣ ಅದೇ ಹುಡುಗಿಯಾಗಿರುವ ಒಂದು ಕಥೆ.
ಡಾ. ಶ್ರೀದೇವಿ ಎಲ್ ರಾಠೋಡ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕನಕಪುರ ತಾಂಡಾದವರು. ತಂದೆ ಎಲ್ ಸೋಮಪ್ಪ, ತಾಯಿ ಪ್ರೇಮಬಾಯಿ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಎಂ. ಎ ಹಾಗೂ ಕುಂಚಿ ಕೊರವ ಮಹಿಳೆಯರ ಸಬಲೀಕರಣ ವಿಷಯವಾಗಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದಿದ್ದಾರೆ. ಯು. ಜಿ. ಸಿ ಧನಸಹಾಯ ಆಯೋಗದಿಂದ ಪೋಸ್ಟ್ ಡಾಕ್ಟರಲ್ ಪದವಿಯನ್ನು ಗುಲಬಗಾ೯ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಸದಾ ಮಹಿಳಾ ಪರ ಕಾಳಜಿ ಮತ್ತು ಚಿಂತನೆಯಲ್ಲಿ ತೊಡಗಿದ್ದಾರೆ. ಸದ್ಯ, ಕಲಬುರಗಿ ಜಿಲ್ಲೆಯ ನಂದೂರು ಬಿ. ಅಂಚೆ ವ್ಯಾಪ್ತಿಯ ಬಾಪುನಾಯಕ ತಾಂಡದಲ್ಲಿ ವಾಸವಿದ್ದಾರೆ. ಲಂಬಾಣಿ ಸಮುದಾಯ ಅಹಾರ ಪದ್ಧತಿ, ಕಂಚಿ ಕೋರವರ ಆಹಾರ ಪದ್ಧತಿ, ಚಿಂದಿ ಆಯುವ ಮಹಿಳೆ ಮತ್ತು ...
READ MORE