ಧರ್ಮವೆಂದರೆ, ಯಜ್ಞ ದಾನ, ತಪಸ್ಸು ಎನ್ನುತ್ತದೆ: ಬೃಹದಾರಣ್ಯಕ ಭಾರತೀಯ ವೇದವಿದ್ಯಾ ಪರಂಪರೆಯಲ್ಲಿ ಒಂದೊಂದು ಪದವೂ ಮಹತ್ತರವಾದ ಅರ್ಥಗಳನ್ನು ಹೊಂದಿರುತ್ತದೆ. ಯಜ್ಞವೆಂದರೆ, ಸಮಿತ್ತುಗಳನ್ನು ಅಗ್ನಿಗೆ ಅರ್ಪಿಸುವುದಷ್ಟೇ ಅಲ್ಲ; ''ಜ್ಞಾನಂ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಿಯಾ ಶ್ರಮದಿಂದ ಮುಗ್ಧತೆಯನ್ನು ಮುಗುಳಿ ಸಿದ್ಧತೆಯನ್ನು ಸ್ಥಾಪಿಸುವುದೂ ಯಜ್ಞವೇ ದಾನವೆಂದರೆ ಬರಿದೇ ಹಣವನ್ನು ನೀಡುವುದಲ್ಲ. ಜೀವನಶೈರಿಯನ್ನು, ಮನೋವಿಕಾಸವಿದವನ್ನು, ಉತ್ತರೋತ್ತರ ಅಭಿವೃದ್ಧಿಯನ್ನು ಸೂಚಿಸುವ ನುಡಿ, ನಡೆಗಳೂ, ದಾನಗಳ ತಪಸ್ಟೆಂದರೆ ಕೇವಲ ಒಂದೆಡೆ ಕುಳತು ಮಂತ್ರವರಣದಲ್ಲಿ ತೊಡಗುವುದಲ್ಲ. ಅದೊಂದು ಗೋಯಪೂರಕ ಕ್ರಿಯೆ, ಮನವನ್ನು ಅವಿಚರಿತಗೊಳಿಸಲು ಅವಶ್ಯವಾದ ತರಬೇತಿ, ಕಸರತ್ತು. ಪ್ರಾಚೀನ ಕಾಲದ ಗುರುಪರಂಪರೆಯು ಹೊಟ್ಟಿಪಾಡಿನಲ್ಲದೆ ವಿಶ್ವಶಾಂತಿಯ, ವಿಶ್ವ ಪ್ರಗತಿಯ ಸಾಧನೆಗೆ ಪೂರಕವಾದ ವಿದ್ಯೆಯನ್ನು ನೀಡುವುದೆ ವೇದ ಎಂಬ ಆಧಾರದ ಮೇಲೆ ಜೀವ ಪರಮಾತ್ಮ ,ಪ್ರಕೃತಿ, ಧರ್ಮ, ಜೀವನಕ್ರಮ ಮುಂತಾದ ಹದಿನಾಲ್ಕು ಜ್ಞಾನ ಪ್ರಕಾರಗಳೊಡನೆ ಆರ್ಯುವೇದ,ಧರ್ನುವೇದ,ಗಾಂಧರ್ವವೇದ ಮತ್ತು ಅರ್ಥಶಾಸ್ತ್ರಗಳನ್ನು ಬೋದಿಸುತ್ತಿದ್ದ ಆ ಪರಂಪರೆಯ ಪಕ್ಷಿನೋಟವನ್ನು ಜಿ.ಎನ್ ಭಟ್ಟ್ ಅವರು ಸಮೀಚವಾಗಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.