ಶೂದ್ರ ಶ್ರೀನಿವಾಸ ಅವರ ಕೃತಿ ‘ಭಾರತೀಯ ಸಾಹಿತ್ಯ ನಿರ್ಮಾಪಕರು ಬಿ.ಸಿ.ರಾಮಚಂದ್ರ ಶರ್ಮ’ ಈ ಕೃತಿಯಲ್ಲಿ ಬಿ.ಸಿ.ರಾಮಚಂದ್ರ ಅವರ ಜೀವನ ಚಿತ್ರವಿದೆ. ಬಿ.ಸಿ.ರಾಮಚಂದ್ರ ಶರ್ಮ ಎಂದಾಕ್ಷಣ ನೆನಪಿನ ನಾನಾ ಸಂಗತಿಗಳು ಗರಿಗೆದರಿ ನಿಲ್ಲುತ್ತದೆ. ಯಾಕೆಂದರೆ ಅಷ್ಟರಮಟ್ಟಿಗೆ ಅವರು ತಮ್ಮ ಬದುಕಿನ ಕಾಲಘಟ್ಟದಲ್ಲಿ ಕ್ರಿಯಾಶಿಲರಾಗಿದ್ದವರು. ಅದರಲ್ಲೂ ನವ್ಯಕಾವ್ಯದ ಪ್ರಾರಂಭದ ಹಂತದಲ್ಲಿ ಅದರ ಬಗ್ಗೆ ನಡೆಯುತ್ತಿದ್ದ ಎಲ್ಲಾ ವಿಧವಾದ ವಾಗ್ವಾದ, ಸಂವಾದಗಳಲ್ಲಿ ಗೋಪಾಲಕೃಷ್ಣ ಅಡಿಗರು ಮತ್ತು ರಾಮಚಂದ್ರಶರ್ಮ ಅವರು ಅದಕ್ಕೆ ಚೇತೋಹಾರಿತನ ತುಂಬಿದವರು ಎಂಬುದಾಗಿ ಲೇಖಕರೇ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಕೃತಿಯ ಪರಿವಿಡಿಯಲ್ಲಿ ನೆನಪಿನ ಅಂಗಳದಲಿ, ಕಾವ್ಯಾನುಸಂಧಾನ:ಶೋಧನಾತ್ಮಕ ಪ್ರಕ್ರಿಯೆ, ಸಾನೆಟ್ ಗಳ ಸೊಬಗಿನ ಮುಂದೆ, ಮಹತ್ವಪೂರ್ಣ ಕವಿಯೊಬ್ಬರ ಕಥಾಲೋಕ, ನಾಟಕಗಳು ಮತ್ತು ಸೃಜನಶೀಲತೆ, ಅನುವಾದ ಪ್ರಕ್ರಿಯೆಯ ‘ಶ್ರೀಮಂತಿಕೆ’ ಎಂಬ ಆರು ವಿಭಾಗಗಳಿವೆ.
ಸೂಕ್ಷ್ಮ ಸಂವೇದನೆಯ ಕವಿ ಶೂದ್ರ ಶ್ರೀನಿವಾಸ್ ಅವರು ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕು ಮುತ್ತಾನಲ್ಲೂರು ಗ್ರಾಮದಲ್ಲಿ. ಈಗ ಬೆಂಗಳೂರು ವಾಸಿ. 1973ರಲ್ಲಿ ಶೂದ್ರ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿ ಅನೇಕ ವರ್ಷಗಳ ಕಾಲ ನಡೆಸಿದರು. 1996ರಲ್ಲಿ ಸಲ್ಲಾಪ ವಾರಪತ್ರಿಕೆ ಪ್ರಾರಂಭಿಸಿ ಒಂದು ವರ್ಷ ನಡೆಸಿದರು. 2002ರಲ್ಲಿ 'ನೆಲದ ಮಾತು' ಎಂಬ ತ್ರೈಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಶೂದ್ರ ಶ್ರೀನಿವಾಸ ಸಮಾಜವಾದಿ ರಾಜಕೀಯ ಚಿಂತನೆಯ ವ್ಯಕ್ತಿ. ಅವರು 1975-76ರಲ್ಲಿ 'ತುರ್ತು ಪರಿಸ್ಥಿತಿ'ಯಲ್ಲಿ ಎರಡು ಬಾರಿ ಬಂಧನ ಮತ್ತು ಸೆರೆಮನೆ ವಾಸ ಕಂಡವರು. 1976ರಲ್ಲಿ ಕೇರಳದ ಕೊಚ್ಚಿನ್‌ನಲ್ಲಿ ನಡೆದ ರಾಷ್ಟ್ರೀಯ ತುರ್ತು ...
READ MORE