`ಬೆಸ್ಟ್ ಆಫ್ ಬಾಗೂರು' ಪುಸ್ತಕವು ಬಾಗೂರರ ಆಯ್ದ ಸ್ವಾರಸ್ಯಕರ ಬರಹಗಳ ಸಂಗ್ರಹವಾಗಿದ್ದು, ಲೇಖಕ ಕೃಷ್ಣ ಸುಬ್ಬರಾವ್ ಸಂಪಾದಿಸಿದ್ದಾರೆ. ಈ ಪುಸ್ತಕದಲ್ಲಿ ನಿತ್ಯ ನಡೆಯ ಘಟನೆಗಳಿಗೆ ಹಾಸ್ಯದ ಲೇಪನ ಹಚ್ಚಿದ್ದು ಓದುಗರನ್ನು ನಕ್ಕು ನಗಿಸುತ್ತದೆ. ಇಲ್ಲಿನ ಲೇಖನಗಳಲ್ಲಿ ಹೆಚ್ಚಿನವು ವಾರಪತ್ರಿಕೆಗಳಲ್ಲಿ ಪ್ರಕಟವಾದವುಗಳು.
ರಾಜ್ಯದ ಸಾಂಸ್ಕೃತಿಕ ಮತ್ತು ಪತ್ರಿಕೋದ್ಯಮ ವಲಯಗಳಲ್ಲಿ ಕೆ.ಎನ್.ವಿ. ಎಂದೇ ಪರಿಚಿತರಾಗಿರುವ ಕಳಲೆ ನಾಗರಾಜರಾವ್ ವೆಂಕಟಸುಬ್ಬರಾವ್ ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವೀಧರರು (ಮೈಸೂರು ವಿಶ್ವವಿದ್ಯಾನಿಲಯ). 1978ರಲ್ಲಿ ಉಪಸಂಪಾದಕರಾಗಿ ಕನ್ನಡ ದೈನಿಕ ಕನ್ನಡ ಪ್ರಭ ಪ್ರವೇಶಿಸಿದರು. ಪತ್ರಿಕೆಯ ಸುದ್ದಿ ಮೇಜು, ಸಾಪ್ತಾಹಿಕ ಪ್ರಭ ಮತ್ತು ಚಿತ್ರಪಭ ವಿಭಾಗಗಳಲ್ಲಿ ಕೆಲಸ ಮಾಡಿದರು. 1993ರಲ್ಲಿ ಹಿರಿಯ ವರದಿಗಾರರಾಗಿ ಇಂಗ್ಲೀಷ್ ದೈನಿಕ ದೈನಿಕ ದಿ ಹಿಂದು (ಬೆಂಗಳೂರು ಆವೃತ್ತಿ) ಸೇರಿದರು. 2011 ರಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದಾರೆ. ಕೃತಿಗಳು: ಝೂಲಾಘಾಟ್ (1988), ತಂತ್ರ (2000), ಮೃಗ (2003) ಇಂದ್ರಪ್ರಸ್ಥ (2009) ಹಾಗೂ ಜೂಜು ...
READ MORE