’ಬಸವನೆ ಮಾಮರ’ ಕೃತಿಯು ಶರಣರ, ಹೊರನಾಡ ಕನ್ನಡಿಗನ ಹೋರಾಟದ ಕಥನವನ್ನು ಕುರಿತು ಮತ್ತು ಕನ್ನಡ ನೆಲದೊಳಗೆ ಅರಳಿ, ಲಂಡನ್ನಿನಲ್ಲಿ ವೃತ್ತಿಯೊಂದಿಗೆ ಸಮಾಜೋಧಾರ್ಮಿಕ ಸೇವೆಯೊಳಗೆ ಸಾಕಾರಗೊಂಡ ಶ್ರೀ ಮಹಾದೇವಯ್ಯನವರ ಜೀವನಾದರ್ಶನವನ್ನು ಒಳಗೊಂಡಿದೆ.
ಈ ಕೃತಿಯಲ್ಲಿ ವಚನಕಾರ ಬಸವಣ್ಣನನ್ನು ಕೇವಲ ಒಂದು ಜಾತಿಯ ಸಾಂಸ್ಕೃತಿಕ ನಾಯಕನಾಗಿ ನೋಡದೆ, ಜಗತ್ತಿನ ಮಾನವತಾವಾದಿ ಚಿಂತಕರ ನೆಲೆಯಲ್ಲಿ ಪರಿಭಾವಿಸಿ ಅವರ ಸಾಧನೆಯ ಹೋರಾಟದ ಪರಿಚಯವನ್ನು ಆ ನೆಲದ ಜನಕ್ಕೆ ತಿಳಿಸುವ ಮಹತ್ವದ ಉದ್ದೇಶವನ್ನು ಮಹದೇವಯ್ಯನವರು ಮಾಡಿದ್ದಾರೆ.
ಮಹಾದೇವಯ್ಯ ಅವರು ವಿದೇಶಿ ನೆಲದಲ್ಲಿ ಕಟ್ಟಿಕೊಂಡ ಬದುಕಿನ ಕೆಲವು ಪುಟಗಳ ಅನುಭವ ಕಥನವನ್ನು’ಬಸವನೆ ಮಾಮರ’ ಕೃತಿಯಲ್ಲಿ ಚಿಂತಕರೂ, ಲೇಖಕರೂ ಆದ ಎಲ್. ಎನ್. ಮುಕುಂದರಾಜ್ ಮತ್ತು ಕವಯತ್ರಿ ಪದ್ಮ ಟಿ. ಅವರು ಸಂಪಾದಿಸಿದ್ದಾರೆ.
©2024 Book Brahma Private Limited.