ಬಸವ ಪುರಾಣ ಸಂಗ್ರಹ ಪಿ.ವಿ ನಾರಾಯಣ ಅವರ ಸಂಪಾದಕತ್ವದ ಕೃತಿಯಾಗಿದೆ. “ಬಸವ ಪುರಾಣ'ವನ್ನು ಬರೆದವನು ಭೀಮಕವಿ, ಇವನ ತಂದೆ ಶಿವ ಕವಿದೇವ, ಶಿವಕವಿದೇವನು ಆಂಧ್ರಭಾಷಾಸತ್ಯ ವಿಶ್ವಕೋವಿದ' ನಾಗಿದ್ದ ವನು. ಇವನೊಮ್ಮೆ ಪಂಪಾಪುರಕ್ಕೆ ಬಂದು ಹರಿಹರನನ್ನು ಕಂಡು ನಮಸ್ಕರಿಸಿ 'ನನಗೆ ಸತ್ಪುತ್ರನೊಬ್ಬನು ಹುಟ್ಟಿದರೆ ನಿಮ್ಮ ಪಾದಸೇವೆಯನ್ನು ಮಾಡು ತ್ತಿರುವ ರಾಘವಾಂಕನ ಸೇವೆ ಮಾಡಿಸಿ ಓದಿಸುತ್ತೇನೆ' ಎಂದು ಹೇಳುತ್ತಾನೆ. ಮುಂದೆ ಅವನಿಗೆ ಗಂಡುಮಗುವಾದಾಗ ಅದಕ್ಕೆ ಭೀಮನೆಂದು ಹೆಸರಿಡುತ್ತಾನೆ. ಆ ಮಗು ಬೆಳೆದ ಮೇಲೆ ಹರಿಹರನಿಗೆ ಒಪ್ಪಿಸಿದಾಗ ಅವನಿಗೆ ವಿದ್ಯೆ ಕಲಿಸ ಬೇಕೆಂದು ಹರಿಹರನು ರಾಘವಾಂಕನಿಗೆ ಹೇಳುತ್ತಾನೆ. ವಿದ್ಯೆಯನ್ನು ಕಲಿತಾದಮೇಲೆ ಕವಿತೆಯನ್ನು ಹೇಳೆಂದು ಹರಿಹರನು ಕೇಳಿದಾಗ ಭೀಮನು 'ಶೃಂಗಿದಂಡಕ'ವನ್ನು ಹೇಳಿದನು. ವಿಷಯವು ಚಿಕ್ಕನಂಜೇಶನ `ರಾಘವಾಂಕಚಾರಿತ್ರ' ದಲ್ಲಿ ಭೀಮಕವಿಯ ಬಗ್ಗೆ ದೊರೆಯುತ್ತದೆ. ಎಂದರೆ ಭೀಮಕವಿಯು ಹರಿಹರ-ರಾಘವಾಂಕರ ಮೇಲ್ವಿಚಾರಣೆಯಲ್ಲಿ ಬೆಳೆದವನೆಂದು ತಿಳಿಯುತ್ತದೆ. ಈತನು ರಾಘವಾಂಕನ ಷಟ್ನದೀ ಪರಂಪರೆಯನ್ನು ಮುಂದುವರಿಸಿರುವುದಕ್ಕೆ ಇದೂ ಕಾರಣವಿರಬಹುದು ಎಂದು ಕೃತಿಯ ಬಗ್ಗೆ ಪಿ.ವಿ ನಾರಾಯಣ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.