ರಾಂ ಎಲ್ಲಂಗಳ ಅವರ ನಾಟಕ ಸಂಕಲನ ಬಹುಮಾನ. ಒಟ್ಟು ಹನ್ನೆರಡು ನಾಟಕಗಳ ಗುಚ್ಚ ಇದಾಗಿದ್ದು, ಸಮಾಜಕ್ಕೆ ಒಳಿತನ್ನು ಮಾಡುವ, ಓದಿದವರಲ್ಲಿ ಜಾಗೃತಿಯನ್ನು ಮೂಡಿಸುವ ನಾಟಕಗಳು ಕೃತಿಯಲ್ಲಿವೆ. ಹೆಣ್ಣು ಯಾವ ರೀತಿಯಲ್ಲೂ ಕೀಳಲ್ಲ, ಅವಳು ಕೂಡ ಸಮಾನಳು ಅನ್ನುವ ವಿಚಾರವನ್ನು ಹೊಂದಿರುವ ನಾಟಕ- "ಬಹುಮಾನ". ಪೌರಾಣಿಕ ಮೆರುಗನ್ನು ನೀಡಿ ಸಂಭಾಷಣೆ ರಚಿತವಾಗಿದೆ. ಅಲ್ಲದೆ ಜಮೀನುದಾರ ಮನೆತನ ನಡೆಸುತ್ತಿದ್ದ ದೌರ್ಜನ್ಯ ಹಾಗೂ ಅದು ಎಷ್ಟು ತಪ್ಪು ಅನ್ನುವ ಎಚ್ಚರಿಕೆಯನ್ನು ನೀಡುವ ಸಂದೇಶ ಈ ನಾಟಕ ಕೃತಿಯಲ್ಲಿದೆ. ಅಲ್ಲದೆ ಪ್ಲಾಸ್ಟಿಕ್ ಸಮಸ್ಯೆಯೂ ಈ ಕೃತಿಯಲ್ಲಿ ಚಿತ್ರಿತವಾಗಿದೆ.
ರಾಂ ಎಲ್ಲಂಗಳ ಅವರು ಬಹುಮುಖ ಪ್ರತಿಭೆ . ಬರಹ ಮಾತ್ರವಲ್ಲದೆ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವವರು. ಮಂಗಳೂರು ಆಕಾಶವಾಣಿಯಲ್ಲಿ ಇವರ ಹಲವಾರು ಕಾರ್ಯಕ್ರಮಗಳು ಈಗಲೂ ಬಿತ್ತರಗೊಳ್ಳುತ್ತಿರುತ್ತವೆ. ಮಕ್ಕಳಿಗಾಗಿ ಸಾಹಿತ್ಯ ರಚಿಸುವವರು ಇವತ್ತಿನ ದಿನಗಳಲ್ಲಿ ಬಹಳ ಕಡಿಮೆ ಮಂದಿ. ಅಂತಹುದರಲ್ಲಿ ಇವರು ನಾಟಕಗಳ ಮೂಲಕ ಮಕ್ಕಳ ಸಾಹಿತ್ಯಕ್ಕೂ ಮಹತ್ವ ನೀಡಿದ್ದಾರೆ ಈ ನಾಟಕಗಳನ್ನು ಮಕ್ಕಳು ಮಾತ್ರವಲ್ಲದೆ ಯಾರು ಬೇಕಾದರೂ ಓದಿ ಆನಂದಿಸಬಹುದು. ಆಕಾಶವಾಣಿಯಲ್ಲಿ ಇವರ ತುಳು ಭಾಷಣಗಳು ಆಗಾಗ ಪ್ರಸಾರಗೊಳ್ಳುತ್ತಿರುತ್ತವೆ. ಕೃತಿಗಳು: ಬೆಳಕು, ಅಪ್ಪಿಕೊ, ಬಹುಮಾನ ...
READ MORE