ಲೇಖಕ, ಚಿಂತಕ ಡಾ. ವಿ. ಮುನಿವೆಂಕಟಪ್ಪ ಅವರ ಕೃತಿ-ಬಹುಜನ ಸಮಾಜ. ಬುದ್ಧನ ಕಾಲಕ್ಕೆ ಶೇ. 85 ರಷ್ಟು ಜನರು ಶ್ರಮಿಕರೇ ಆಗಿದ್ದರು. ಅವರಿಗೆ ಊಟ, ವಿದ್ಯೆ, ಬಟ್ಟೆ ಹೀಗೆ ಕನಿಷ್ಠ ಸೌಲಭ್ಯಗಳು ಇರಲಿಲ್ಲ. 2600 ವರ್ಷಗಳ ಹಿಂದೆ ಬುದ್ಧನು ಅರಸೊತ್ತಿಗೆ ತ್ಯಜಿಸಿದ್ದು, ಬುದ್ಧನಾಗಿ ಹಿಂದಿರುಗಿದಾಗ ಆತ ಬೋಧಿಸಿದ ಪಂಚಶೀಲ, ಅಷ್ಟಾಂಗ ಮಾರ್ಗ ಹಾಗೂ ಧಮ್ಮ ಇವನ್ನು ಗಂಭೀರವಾಗಿ ತೆಗೆದುಕೊಳ್ಳದಂತೆ ಮರೆಯಲ್ಲಿಡಲಾಯಿತು. ಪಾಳಿ ಭಾಷೆಯಲ್ಲಿರುವ ಬೌದ್ಧ ಸಾಹಿತ್ಯವನ್ನು ತಿಪಿಟಿಕ ಎಂದು ಹೇಳುತ್ತಾರೆ. ನಂತರ ಬಂದ ಬಸವಣ್ಣ, ಅಂಬೇಡ್ಕರ ಅವರ ವಿಚಾರಗಳು ಬುದ್ಧನ ಮಾರ್ಗದಿಂದ ಹೊರತಾಗಿಲ್ಲ. ಹೀಗೆ ಬಹುಜನರ ಸಮಾಜದ ಅಭಿವೃದ್ಧಿಗಾಗಿ ಇವು ಶ್ರಮಿಸಿದ್ದರೂ ಬಹುಜನರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾದರು ಮತ್ತು ಅವರನ್ನು ಈ ವಿಚಾರದಿಂದ ದೂರ ಇರುವಂತೆ ಸನ್ನಿವೇಶಗಳನ್ನು ಸೃಷ್ಟಿಸಲಾಯಿತು. ಇಂತಹ ವೈಚಾರಿಕತೆಯ ಕೃತಿ ಇದು.
ಲೇಖಕ, ಚಿಂತಕ ವಿ. ಮುನಿವೆಂಕಟಪ್ಪ ಅವರು ಸೈದ್ಧಾಂತಿಕ ಬದ್ಧತೆಯನ್ನು ಉಸಿರಾಗಿಸಿಕೊಂಡವರು. ಕೋಲಾರ ತಾಲೂಕಿನ ಎಡಹಳ್ಳಿಯವರು. ಕೃತಿಗಳು: ಮಹಿಳಾ ಸಬಲೀಕರಣ, ದಲಿತ ಚಳವಳಿ: ಒಂದು ಅವಲೋಕನ, ಸಾಮಾಜಿಕ ದಾರ್ಶನಿಕರು, ವಿಶ್ವಚೇತನ ಬುದ್ಧ, ಮಹಾ ಮಾನವ ಬುದ್ಧ, ಮಹಾಮಾನವ ಬಸವಣ್ಣ, ಶರಣಧರ್ಮ ಚರಿತ್ರೆ, ದಲಿತ ಚಳವಳಿ ಮತ್ತು ಇತರೆ ಲೇಖನಗಳು ಬಹುಜನ ಭಾರತ, ಬಹುಜನ ಚಳವಳಿ, ಬಹುಜನ ಸಮಾಜ, ಅಂಬೇಡ್ಕರ ಪರಿಕಲ್ಪನೆ ಹೀಗೆ ಹತ್ತು ಹಲವು ಕೃತಿಗಳ ಮೂಲಕ ಓದುಗರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾರೆ. ದಲಿತ ಚಳವಳಿ ನಡೆದು ಬಂದ ದಾರಿಯ ಚರಿತ್ರೆಯನ್ನು ಸುಮಾರು 17 ಸಂಪುಟಗಳಲ್ಲಿ ದಾಖಲಿಸಿದ್ದು ಇವರ ಓದಿನ ...
READ MORE