ಲೇಖಕ ಎಸ್. ಅನಂತನಾರಾಯಣ ಅವರು ಬರೆದ ಮೊದಲ ಕವನ ಸಂಕಲನ ಕೃತಿ ʻಬಾಡದ ಹೂವುʼ. ಪುಸ್ತಕದ ಬಗ್ಗೆ ಸ್ವತಃ ಲೇಖಕರೇ ಹೇಳುವಂತೆ, “ 1947ರಲ್ಲಿ ನಾನು ಬರೆಯಲಾರಂಭಿಸಿದಾಗಿನಿಂದ 1944ರ ಕೊನೆಯವರೆಗೆ ಬರೆದ ಕವನಗಳಲ್ಲಿ ಹೆಚ್ಚಿನವು ಇಲ್ಲಿವೆ. ಮೂರು ನಾಲ್ಕು ದೊಡ್ಡ ಕವಿತೆಗಳನ್ನು ಬಿಟ್ಟು ಉಳಿದುದೆಲ್ಲಾ ಭಾವಗೀತೆಗಳು. ಯಾವುದೋ ಒಂದು ಭಾವಲಹರಿಯಲ್ಲಿ ತೇಲಿ ಬಿಟ್ಟ ಮಾತಿನ ಹಾಯಿ ದೋಣಿಗಳು. ಕೆಲವು ಗೀತಗಳಲ್ಲಿ ಭಾವಕ್ಕೆ ಅನುವಾಗಿ ಹೊಸಗತಿ, ಹೊಸಛಂದಗಳನ್ನು ಬಳಸಿಕೊಂಡಿದ್ದೇನೆ. ಇವುಗಳಲ್ಲಿ ಹೆಚ್ಚಿನವು ಹಾಡಲೆಂದು ಬರೆದವು. ಹಾಡಿಕೊಂಡರೆ ಅವುಗಳ ರಸಾನುಭವ ಹೆಚ್ಚಾಗಬಹುದೆಂಬುದು ನನ್ನ ಸೂಚನೆ” ಎಂದು ಹೇಳಿದ್ದಾರೆ.
ಎಸ್. ಅನಂತನಾರಾಯಣ ಕನ್ನಡದ ಪ್ರಗತಿಶೀಲ ಬರಹಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಪ್ರೊ. ಅನಂತ ನಾರಾಯಣ ಅವರು ನವೆಂಬರ್ 30, 1925 ರಲ್ಲಿ ಮೈಸೂರಿನಲ್ಲಿ ಜನಿಸಿದರು. ತಂದೆ ಆರ್. ಸದಾಶಿವಯ್ಯನವರು ಮತ್ತು ತಾಯಿ ರಂಗಮ್ಮನವರು. ಇಂಗ್ಲಿಷ್ ಸಾಹಿತ್ಯದಲ್ಲಿ ಬಿ.ಎ. (ಆನರ್ಸ್) ಮತ್ತು ಎಂ.ಎ. ಪದವಿಗಳನ್ನು ಪ್ರಪ್ರಥಮ ಶ್ರೇಣಿಯಲ್ಲಿ ಚಿನ್ನದ ಪದಕಗಳೊಂದಿಗೆ ಗಳಿಸಿದರು. ಅವರು ಮೈಸೂರು ವಿಶ್ವವಿದ್ಯಾನಿಲಯದ ಹಲವಾರು ಕಾಲೇಜುಗಳಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಸಂಗೀತ, ನಾಟಕ ಕಾಲೇಜಿನಲ್ಲಿ ಮೂರು ವರ್ಷ ನಾಟಕ ಶಾಸ್ತ್ರದ ಬೋಧಕರಾಗಿ, ನಾಟಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ಧಾರೆ. ನವೋದಯ ಕಾಲದ ಬರಹಗಾರರು ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದು ಸಹಜ ಕ್ರಿಯೆ. ...
READ MORE