ಅತ್ತಿತ್ತದವಲೋಕನ ಕೆ.ಎನ್ ಗಣೇಶಯ್ಯ ಅವರ ಲೇಖನಗಳ ಕೃತಿಯಾಗಿದೆ. ಸಾವಿನಂತಹಾ ತಾತ್ವಿಕ ವಿಚಾರದಲ್ಲಿ, ಸೌಂದರ್ಯ ಪ್ರಜ್ಞೆಯಂತಹ ಅಪ್ಪಟ ದೈಹಿಕ ವಿಚಾರದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯನವರು ನಡೆಸುವ ವೈಜ್ಞಾನಿಕ ಚಿಂತನೆ ಎಲ್ಲರನ್ನೂ ಆಲೋಚನೆಗೆ ಹಚ್ಚುವಂತದ್ದು. ಹಾಗೆಯೇ ಹಂಪೆಯ ಇತಿಹಾಸವನ್ನು ಕುರಿತ ಲೇಖನ, “ಕನ್ನಡ ಅಕ್ಷರ ಮಾಲೆಯ ರಾಜರಾಣಿಯರು ಯಾರು' ಎಂಬ ಲೇಖನಗಳಂತೂ ಅತ್ಯಂತ ಆಸಕ್ತಿದಾಯಕ ವಾಗಿದೆ ಮತ್ತು ಕನ್ನಡದಲ್ಲಿ ಈ ಬಗೆಯ ಮೊತ್ತ ಮೊದಲ ಬರಹಗಳಾಗಿವೆ ಎಂದು ಕೆ.ಎನ್ ಗಣೇಶಯ್ಯ ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
ವೃತ್ತಿಯಿಂದ ಕೃಷಿ ವಿಜ್ಞಾನಿ ಆಗಿರುವ ಕೆ.ಎನ್. ಗಣೇಶಯ್ಯ ಅವರು ಮೂಲತಃ ಕೋಲಾರ ಜಿಲ್ಲೆಯವರು. ಕಳೆದ ೩೦ ವರ್ಷಗಳಿಂದ ತಳಿ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವ ವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿಯ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧ ಬರೆದಿರುವ ಅವರು ಆರು ವೈಜ್ಞಾನಿಕ ಕೃತಿಗಳನ್ನು ...
READ MORE