ಆತ್ಮದರ್ಶನ ಆಧ್ಯಾತ್ಮ ಬರಹಗಳ ಪುಸ್ತಕವನ್ನು ಲೇಖಕ ವಿರೂಪಾಕ್ಷ ಬೆಳವಾಡಿ ಅವರು ರಚಿಸಿದ್ದಾರೆ. ಆತ್ಮದರ್ಶನ ಎಂದರೆ ನಮ್ಮ ಶರೀರದ ಒಡೆಯನಾಗಿರುವ ಆತ್ಮವನ್ನು ಪರಿಶುದ್ಧ, ಜಾಗೃತ ಹಾಗೂ ಕ್ರಿಯಾತ್ಮಕವಾಗುವಂತೆ ಮಾಡುವ ಒಂದು ಕ್ರಿಯೆ. ಇದಕ್ಕೆ ಅನುಸರಿಸಬೇಕಾದ ಮಾರ್ಗಗಳೆಂದರೆ ಉತ್ತಮವಾದ ಆಹಾರ ಸೇವನೆ, ಪಂಚಕೋಶಗಳ ಶುದ್ಧಿ, ಪಂಚಪ್ರಾಣ ಹಾಗೂ ಪಂಚ ಉಪಪ್ರಾಣಗಳನ್ನು ಕ್ರಿಯಾಶೀಲವಾಗಿ ಇಟ್ಟುಕೊಳ್ಳುವುದು, ವ್ಯಾಯಾಮ, ಆಸನಗಳ ಮೂಲಕ ಸದೃಢ ಶರೀರ, ಪ್ರಾಣಾಯಾಮ, ಧ್ಯಾನ, ಜಪ, ಮಂತ್ರೋಚ್ಛಾರಣೆ, ಭಗವಂತನ ನಾಮಸ್ಮರಣೆ, ಸತಚಿಂತನೆಗಳ ಮೂಲಕ ನಮ್ಮೊಳಗೆ ಸುಪ್ತಾವಸ್ತೆಯಲ್ಲಿರುವ ಅಥವಾ ನಿಷ್ಕ್ರೀಯವಾಗಿರುವ, ತಾಮಸ ಗುಣಗಳನ್ನ್ಹೊಂದಿರುವ ಆತ್ಮನನ್ನು ಸಾತ್ವಿಕಗೊಳಿಸಿ , ಜಾಗೃತಾವಸ್ಥೆಗೆ ತರುವುದು ಮತ್ತು ಆತ್ಮದ ಮೂಲಕ ಪರಮಾತ್ಮನನ್ನು ಕಾಣುವುದು ಇದೇ ಆತ್ಮದರ್ಶನವಾಗಿದೆ. ಮುಂದಿನ ಅಧ್ಯಾಯಗಳಲ್ಲಿ ಆತ್ಮ ಎಂದರೇನು? ಆತ್ಮದ ಅರಿವು ಹೇಗೆ ಆಗುತ್ತದೆ? ಆತ್ಮ, ಪರಮಾತ್ಮ, ಪ್ರೇತಾತ್ಮ ಇವುಗಳ ವ್ಯತ್ಯಾಸವೇನು? ಆತ್ಮ ಪರಮಾತ್ಮನಲ್ಲಿ ಲೀನವಾಗಬೇಕಾದರೆ ಏನು ಮಾಡಬೇಕು ? ಎಂಬಿತ್ಯಾದಿ ಅನೇಕ ವಿಚಾರಗಳನ್ನು ಕೃತಿಯಲ್ಲಿ ತಿಳಿಸಲಾಗಿದೆ ಎಂದು ಕೃತಿಯ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
ವಿರೂಪಾಕ್ಷ ಬೆಳವಾಡಿ, ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯವರು. ಸುಮಾರು 25 ವರ್ಷಗಳಿಂದ ಯೋಗಕ್ಷೇತ್ರದಲ್ಲಿದ್ದು ನಾಡಿನಾದ್ಯಂತ ಯೋಗದ ಮೂಲಕ ಆರೋಗ್ಯವೃದ್ಧಿಗೆ ಶ್ರಮಿಸುತ್ತಿದ್ದಾರೆ. ಯೋಗಕ್ಷೇಮ ಎಂಬ ಸಂಸ್ಥೆಯ ಮೂಲಕ ಯೋಗ ಶಿಬಿರಗಳನ್ನು ನಡೆಸುತ್ತಿದ್ದು, ಸೂರ್ಯೋಪಾಸನೆ, ಸಂಸ್ಕಾರ ಸಿಂಚನ ,ಜನನಿ, ಸಾಧನಗಳೊಂದಿಗೆ ಯೋಗಸಾಧನೆ ಎಂಬ 7 ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯಲೋಕ ಪಬ್ಲಿಕೇಷನ್ಸ್‌ನಿಂದ ಸಾವಿರದ ಸತ್ಯ ,ಜನನಿ,ಆತ್ಮದರ್ಶನ ಎಂಬ 3 ಪುಸ್ತಕಗಳು ಪ್ರಕಟವಾಗಿವೆ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ "ಡೈಲಿಯೋಗ" ಎಂಬ ಹೆಸರಿನ ಯೋಗಕ್ಕೆ ಸಂಬಂಧಿಸಿದಂತೆ 650ಕ್ಕೂ ಹೆಚ್ಚು ಅಂಕಣಗಳನ್ನು ಬರೆದಿದ್ದು, ಇವರ ಯೋಗಸಾಧನೆ ಗುರುತಿಸಿ 2018ರಲ್ಲಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಹಾಗೂ ನಾಡ ಭೂಷಣ ಪ್ರಶಸ್ತಿ ಲಭಿಸಿದೆ. ...
READ MORE