ಈ ಜಗತ್ತಿನ ಮಹಾನ್ ಪುರುಷರು ಮತ್ತು ಮಹಿಳೆಯರಿಗೆ ಅಸಾಧಾರಣ ಅದೃಷ್ಟವೋ, ಪ್ರತಿಭೆಯೋ ಅಥವಾ ಅನುಭವಗಳೋ ಇದ್ದಿರಲಿಲ್ಲ. ಒಂದೇ ಮಜಲಿನಲ್ಲಿ ಅವರೆಲ್ಲ ಜೀವಿಸಿದ್ದರು: 'ಹಾದಿಯಲ್ಲಿ ಏನೆಲ್ಲಾ ಅಡ್ಡಿಯಾದವೋ ಅವೇ ಅವರಿಗೆ ದಾರಿತೋರಿದವು.' ಈ ಸರಳ ತತ್ವದ ಸುತ್ತ ಹೆಣೆದ ತತ್ವಜ್ಞಾನವೇನಿದೆ ಅದನ್ನು ೨,೦೦೦ ವರ್ಷಗಳ ಹಿಂದೆ ಆವಿಷ್ಕರಿಸಲ್ಪಟ್ಟಿತು ಮತ್ತು ಅಂದಿನಿಂದ ಯುದ್ಧಗಳಲ್ಲಿ ಹಾಗೂ ಬೋರ್ಡ್ರೂಮ್ ಸಭೆಗಳಲ್ಲಿ ಸಾಬೀತಾದವು. ದಿ ಅಬ್ಸ್ಪೆಕಲ್ ಈಸ್ ದಿ ವೇ, ಪುಸ್ತಕದಲ್ಲಿ ಅಂತಾರಾಷ್ಟ್ರೀಯ ಹೆಸರಾಂತ ಮಾರುಕಟ್ಟೆಯ ಗುರು ಮತ್ತು ಬೆಸ್ಟ್ ಸೆಲ್ಲಿಂಗ್ ಲೇಖಕರಾದ ರಿಯಾನ್ ಹಾಲಿಡೇ ಈ ಮರೆತುಹೋದ ಸೂತ್ರವನ್ನು ಅಳವಡಿಸಿ ಇಂದಿನ ಜಗತ್ತಿನಲ್ಲಿ ಇಲ್ಲಿ ಉಲ್ಲೇಖಿಸಿದವರೆಲ್ಲ ಹೇಗೆ ಯಶಸ್ವಿಯಾದರು ಎಂಬುದನ್ನು ಸಾದರಪಡಿಸಿದ್ದಾರೆ: • ಜಾನ್ ಡಿ. ರಾಕ್ಫೆಲ್ಲರ್, ಆರ್ಥಿಕ ಹಿಂಜರಿತದ ಹಿನ್ನೆಡೆಯಲ್ಲಿ ಹೇಗೆ ಶ್ರೀಮಂತರಾದರು. • ಗಾಂಧೀಜಿ ತಮ್ಮ ದೌಬಲ್ಯಗಳನ್ನೇ ಬ್ರಿಟಿಷ್ ಮಿಲಿಟರಿ ಸಾಮ್ರಾಜ್ಯದ ವಿರುದ್ಧವಾಗಿ ಹೇಗೆ ಬಳಸಿದರು. • ಸ್ಟೀವ್ ಜಾಬ್ ಅಸಾಧ್ಯಗಳನ್ನು ಹೇಗೆ ಸಾಧ್ಯವಾಗಿಸಿದರು. ನಿಮ್ಮ ಗ್ರಹಿಕೆಗಳನ್ನು ನಿಭಾಯಿಸಿ, ನೀವು ವಸ್ತು-ವಿಷಯಗಳನ್ನು ಬದಲಾಯಿಸುವಾಗ ಅವನ್ನು ಗುರುತಿಸಿ. ನಿಮ್ಮ ಕ್ರಿಯಾತ್ಮಕತೆಯನ್ನು ನಿರ್ದೇಶಿಸಿ, ಮತ್ತು ಪ್ರತಿಯೊಂದು ಅಡೆತಡೆಯನ್ನು ನಿಮಗೆ ಅನುಕೂಲವಾಗಿಸುವುದನ್ನು ಕಲಿಯಿರಿ. ' ಒಂದು ಓದಲೇ ಬೇಕಾದ ಪುಸ್ತಕ... ಯಾವುದೇ ಅಡೆತಡೆಯನ್ನು ಸೀಳಿ ಮುನ್ನುಗ್ಗಿ ಮತ್ತು ಯಾವುದೇ ಸಂಘರ್ಷವನ್ನು ಪರಿಹರಿಸಿಕೊಳ್ಳಿರಿ. - ಜಿಮ್ಮಿ ಸೋನಿ, ದಿ ಹಫಿಂಗ್ಟನ್ ಪೋಸ್ಟ್ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ರೋಮ್ಸ್ ಲಾಸ್ಟ್ ಸಿಟಿಜನ್ನ ಲೇಖಕರು.
©2024 Book Brahma Private Limited.