Book Watchers

ನಾಗರೇಖಾ ಗಾಂವಕರ

ಸೂಕ್ಷ್ಮ ಸಂವೇದನೆಯ ಕತೆಗಾರ್ತಿ ನಾಗರೇಖಾ ಗಾಂವಕರ ಅವರು ಮೂಲತಃ ಉತ್ತರ ಕನ್ನಡದವರು. ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಸ್ನಾತಕೋತ್ತರ ಪದವಿಧರೆಯಾದ ಅವರು ಪ್ರಸ್ತುತ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. `ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ’ ( ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ(ಅಂಕಣಬರಹ ಕೃತಿ), ಸಮಾನತೆಯ ಸಂಧಿಕಾಲದಲ್ಲಿ (ಮಹಿಳಾ ಸಮಾನತೆಯ ಕುರಿತ ಅಂಕಣ ಬರಹ ಕೃತಿ), ಕವಾಟ (ಪುಸ್ತಕ ಪರಿಚಯ ಕೃತಿ) ಅವರ ಪ್ರಮುಖ ಕೃತಿಗಳು.

Articles

ಜೀವನ್ಮುಖಿ ಧೋರಣೆಯ ಚೌಕಟ್ಟು ‘ಕರಕೀಯ ಕುಡಿ’

ಆನಂದ ಋಗ್ವೇದಿ ಅವರ ಇತ್ತೀಚಿನ ಕಥೆಗಾರರಲ್ಲಿ ತಮ್ಮ ಜೀವನಾನುಭವಗಳಲ್ಲಿ ಕಂಡ ಸಂಘರ್ಷ ಹಾಗೂ ಸೂಕ್ಷ್ಮ ಸಂವೇದನೆಯ ಮೂಲಕ ಲೋಕದ ವ್ಯಾಪಾರಗಳಲ್ಲಿ ಕಂಡುಕೊಂಡ ಹಲವು ಚಿತ್ರಗಳನ್ನು ವಸ್ತುನಿಷ್ಟವಾಗಿ ಕಟ್ಟಿಕೊಡುತ್ತಾರೆ. ಅದಕ್ಕೆ ಕಾರಣಗಳೂ ಇವೆ. ವಸ್ತುನಿಷ್ಠ ಸಾಹಿತ್ಯ ಯಾವತ್ತಿಗೂ ವ್ಯಕ್ತಿಯನ್ನ ಕೇಂದ್ರವಾಗಿಟ್ಟುಕೊಳ್ಳದೇ, ವಸ್ತುವನ್ನು ಸಮಗ್ರವಾಗಿ ಸಾಮಾಜಿಕ ಸ್ವರೂಪದ ಹಿನ್ನೆಲೆಯಲ್ಲಿ ಪರಿಭಾವಿಸುತ್ತದೆ.

Read More...