Book Watchers

ಅಮೃತಹಳ್ಳಿ ಲಕ್ಷ್ಮೀನಾರಾಯಣ

ಲಕ್ಷ್ಮೀನಾರಾಯಣ ಅವರು ಮೂಲತಃ ಬೆಂಗಳೂರಿನ ಅಮೃತಹಳ್ಳಿಯವರು. ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನ ಆದರ್ಶ ಪಿಯು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಾಸಕ್ತಿ ಇದ್ದ ಇವರಿಗೆ ಕತೆ, ಕವಿತೆ ಹಾಗೂ ವಿಮರ್ಶೆ ಬರವಣಿಗೆ ಪ್ರಮುಖ ಹವ್ಯಾಸಗಳಾಗಿವೆ.

Articles

ಎಲ್ಲ ಇಸಂಗಳನ್ನು ಮೀರಿದ ಕೇಂದ್ರ ಪ್ರಜ್ಞೆಯುಳ್ಳ ಹೊಸಹಾದಿ

ಬದುಕಿನ ರಸಾತ್ಮಕವಾದ  ಚೆಲುವು, ಒಲವು, ನಿಲುವು ಹಾಗೂ ಒಳಿತು-ಕೆಡುಕುಗಳನ್ನು ಘನವಾಗಿ ಕಟ್ಟಿಕೊಡುತ್ತಿರುವದರಿಂದ  ಕನ್ನಡ ಭಾಷೆಯೂ ಇನ್ನಷ್ಟು ಶ್ರೀಮಂತವಾಗುತ್ತಿದೆ. ಆದರೆ ವಿದ್ಯಾ ನೆಲೆಯಲ್ಲಿ ಕನ್ನಡ ಗದ್ಯ ಸಾಹಿತ್ಯದ ಪ್ರಕಾರಗಳಲ್ಲಿ ಕಾದಂಬರಿಗಳಿಗೆ ಸಿಕ್ಕಷ್ಟು ಮಾನ್ಯತೆಯಾಗಲಿ, ಪ್ರೋತ್ಸಾಹವಾಗಲಿ ಸಣ್ಣಕತೆಗಳಿಗೆ ಸಿಗದೆ ಇರುವುದು ಒಂದು ನೋವಿನ ಸಂಗತಿ. ಇದಕ್ಕೆ ಕಾರಣಗಳು ಏನೇ ಇರಲಿ. ಕಾದಂಬರಿಗಳಿಗಿಂತ ಸಣ್ಣಕತೆಗಳು ಯಾವ ಕಲಾತ್ಮಕ ಸೃಜನಶೀಲ ಅಭಿವ್ಯಕ್ತಿಗಿಂತಲೂ ಕಡಿಮೆಯಲ್ಲವೆಂಬುದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ಈ ಕಾಲಘಟ್ಟದ ಬದುಕಿನ ವಿದ್ಯಮಾನಗಳನ್ನು ಸಣ್ಣಕತೆಗಳ ಮೂಲಕ ಕಟ್ಟಿಕೊಡುತ್ತಿರುವ  ಸತೀಶ್ ಚಪ್ಪರಿಕೆ ಅವರು ಒಬ್ಬ ಯಶಸ್ವೀ ಕಥೆಗಾರರಾಗಿದ್ದಾರೆ.

Read More...