Story/Poem

ಶ್ರೀಧರ ಬಳಗಾರ

ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ  ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ  'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.

More About Author

Story/Poem

ಹೆಮ್ಮಾಡಿಯ ಹೆಂಗಸರು

ಈ ವರ್ಷ ಹೆಮ್ಮಾಡಿಗೆ ಸೊಸೆಯಾಗಿ ಬಂದವರಲ್ಲಿ ರತಿ ಮೂರನೆಯವಳು. ಅವಳ ಹೆಸರೇ ಹಲವರ ನಿದ್ದೆಗೆಡಿಸಲು ಕಾರಣವಾಯಿತು. ನಾಗಿ, ಗಣಪಿ, ಪಾತಿ, ಗ್ವಾದು ಹೀಗೆ ವಂಶಸ್ಥರ ನೆನಪಿಗೆ ತಲೆಮಾರುಗಳಿಂದ ಪುನರಾವರ್ತನೆಯಾದ ನಿರಾಕರ್ಷಕ ನಾಮಧಾರಿಗಳಾದ ಗರತಿಯರು ತಲ್ಲಣಿಸಿದ್ದು ಅವಳ ಕ್ರಾಂತಿಕಾರಕ ಹೆಸರು, ವೇಷ,...

Read More...