ಕಿರಣ್ ಗಿರ್ಗಿ
ಚಾಮರಾಜನಗರ ಜಿಲ್ಲೆ ಮತ್ತು ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದವರಾದ ಕಿರಣ್ ಗಿರ್ಗಿ (1992) ಸೃಜನಶೀಲ ರಂಗ ನಿರ್ದೇಶಕ, ನಟ, ಸಂಗೀತ ಸಂಯೋಜಕ ಹಾಗೂ ಕವಿ. 'ನ್ಯಾಣ' ಕವಿತೆಗಳು ಇವರ ಚೊಚ್ಚಲ ಸಾಹಿತ್ಯ ಕೃತಿ. ಕಿರಣ್ ಕುಮಾರ್ ಎಸ್.ಕೆ. ಎಂಬುದು ಇವರ ಮೂಲ ಹೆಸರಾಗಿದ್ದರೂ ಕಿರಣ್ ಗಿರ್ಗಿ ಅಂತಲೇ ಚಿರಪರಿಚಿತರು. ಶಿಕ್ಷಣದಲ್ಲಿ ಡಿಪ್ಲೋಮಾ (ಡಿ.ಎಡ್.) ವಿದ್ಯಾರ್ಹತೆ ಹೊಂದಿದ ಇವರು ಮೈಸೂರಿನ "ಭಾರತೀಯ ರಂಗ ಶಿಕ್ಷಣ ಕೇಂದ್ರ-ರಂಗಾಯಣ"ದಲ್ಲಿ 2012-13ನೇ ಸಾಲಿನ ರಂಗಾಭ್ಯಾಸಿಯಾಗಿ 'ಡಿಪ್ಲೊಮಾ ಇನ್ ಥಿಯೇಟರ್ ಎಜುಕೇಷನ್' ಕೋರ್ಸ್ ಮುಗಿಸಿ ರಂಗಾಯಣದ ಕಿರಿಯ ಕಲಾವಿದರಾಗಿ, ತಂತ್ರಜ್ಞರಾಗಿ ಕೆಲಸ ನಿರ್ವಹಿಸಿದ್ದಾರೆ. 'ಕೋಳಿ ಎಸ್ರು', 'ಚಿರತೆ ಬಂತು ಚಿರತೆ', 'ಧರೆಗೆ ದೊಡ್ಡವರು ಮಂಟೇಸ್ವಾಮಿ-ಬಂಡಾಯದೊಡೆಯ' ಚಲನಚಿತ್ರಗಳಲ್ಲಿ ಹಾಗೂ ಸಂಕ್ರಾಂತಿ, ಭಗದಜ್ಜುಕೀಯಂ, ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್, ಹ್ಹ...!!!, ವೆನಿಸ್ಸಿನ ವ್ಯಾಪಾರ, ಗೊಂಬೆ, ಸಧ್ಯಕ್ಕಿದು ಹುಚ್ಚರ ಸಂತೆ, ಕಂಸಾಯಣ, ರತ್ನ ಮಾಂಗಲ್ಯ, ಮುಂತಾದ ನಾಟಕಗಳಲ್ಲಿ ಅಭಿನಯಿಸಿ ಪ್ರಶಂಸೆ ಗಳಿಸಿದ್ದಾರೆ.
More About Author