ಎಚ್. ಎನ್. ಆರತಿ
ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್.ಎನ್. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ. ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ.
More About Author