Story/Poem

ಧನಂಜಯ ಕುಂಬ್ಳೆ

ಲೇಖಕ ಧನಂಜಯ ಕುಂಬ್ಳೆ ಅವರು ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ  1975 ಡಿಸೆಂಬರ್ 11ರಂದು ಜನಿಸಿದರು. ಪ್ರಸ್ತುತ ದ.ಕ ಜಿಲ್ಲೆಯ ಮೂಡುಬಿದಿರೆ ನಿವಾಸಿ. ಕಲ್ಲಿಕೋಟೆ ವಿಶ್ವವಿದ್ಯಾಲಯದಲ್ಲಿ ಬಿ. ಎ. ಪದವಿಯನ್ನು ಮೂರನೇ ರ್‍ಯಾಂಕ್‌ನೊಂದಿಗೆ ಹಾಗೂ ನಂತರ 1999ರಲ್ಲಿ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನೂ ಸಹ ತೃತಿಯ ರ್‍ಯಾಂಕ್‌ನೊಂದಿಗೆ ಪೂರೈಸಿದರು. ‘ಅರುಣಾಬ್ಜ ಮತ್ತು ಕುಮಾರವ್ಯಾಸ: ತೌಲನಿಕ ಅಧ್ಯಯನ’ ಅವರ ಪಿಎಚ್‌.ಡಿ ಗ್ರಂಥ. ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ, ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಇವರು ಈಗ  ಮಂಗಳೂರು ವಿಶ್ವವಿದ್ಯಾಲಯದ ಎಸ್ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

More About Author

Story/Poem

ಮಂಜುಗಡ್ಡೆ

ನಾನು ಈ ಮಂಜುಗಡ್ಡೆಯಾಗುವುದಕ್ಕೆ ನುಂಗಿದ ಬೆಂಕಿಯೆಷ್ಟು ನೋವು ಅವಮಾನ ಸಂಕಟಗಳ ಬೇಗೆಯನು ಅದುಮಿಟ್ಟು ಕಾವು ಕೊಟ್ಟು ಘನೀಕರಿಸಿದ್ದೇನೆ ಸರಸರನೆ ಹರಿದು ಹೋಗಬಹುದಾಗಿದ್ದವನ ಹಿಡಿದು ಹಿಟ್ಟಿಗೆ ಸುರಿದು ಹಿಂಡಿ ಹಿಪ್ಪೆ ಮಾಡಿ ಮೇಲಿಂದ ಕೆಳ ಬಡಿದು ಅವರವರಿಗೆ ಬೇಕಾದಂತೆ ಸಮ ಮಾಡಿ ಲ...

Read More...

ಇಲ್ಲಿದೆ ಸ್ವಾತಂತ್ರ್ಯ 

ಇಲ್ಲಿ ಸ್ವಾತಂತ್ರ್ಯ ಬಿಳಿ ಪಾರಿವಾಳಗಳ ಆಕಾಶಕ್ಕೆ ಹಾರಿ ಬಿಡುವುದರಲ್ಲಿದೆ ತ್ರಿವರ್ಣ ಬಲೂನುಗಳ ಊದಿ ಕಂಬಕ್ಕೆ ಕಟ್ಟಿ ಸಿಂಗರಿಸುವುದರಲ್ಲಿದೆ ಇಲ್ಲಿ ಸ್ವಾತಂತ್ರ್ಯ ಶಾಲೆ ಕಾಲೇಜುಗಳ ಮೈದಾನದಲ್ಲಿ ಧ್ವಜ ಹಾರಿಸುವುದರಲ್ಲಿದೆ ರಾಜಕಾರಣಿಗಳ ಇಸ್ತ್ರಿ ಹಾಕಿದ ಬಿಳಿಯಾದ ಗರಿ ಗರಿ ಅಂಗಿಗಳಲ್ಲ...

Read More...

ಹೊಕ್ಕುಳಲ್ಲಿ ಹೂವಿದೆ

  ಪಡ್ಡೆ ಹುಡುಗರು ಸಾಲಾಗಿ ಗಂಗೋತ್ರಿಯ ಸ್ಟ್ಯಾಂಡಲ್ಲಿ ಕುಳಿತು ಕುಣಿಯುವ ಹೊಕ್ಕುಳಿಗೆ ಕಾದಿದ್ದಾರೆ ಎಷ್ಟು ಮುಚ್ಚಿಟ್ಟರೂ ತಾಯಿಯಾಗುವ ಹಂಬಲ ಇಣುಕುವಂತೆ ಇಣುಕುವುದು ಬಳ್ಳಿಯ ಮೂಲ. ಕ್ಯಾಮರಾಮಾನ್ ಈಗ ಅರ್ಜುನ ಅವನಿಗೆ ರೆಂಬೆ ಕೊಂಬೆಗಳಾವುವೂ ಕಾಣುತ್ತಿಲ್ಲ ಹೊಕ್ಕುಳು ಬರಿ ...

Read More...