ಕನ್ನಡ ಪುಸ್ತಕೋದ್ಯಮದಲ್ಲಿಯೇ ಮೊದಲ ಬಾರಿಗೆ ಲೇಖಕರನ್ನು ಸಂಪೂರ್ಣವಾಗಿ ಒಳಗೊಂಡು ಓದುಗರನ್ನು ತಲುಪುವ ನಿಟ್ಟಿನಲ್ಲಿ ಒಂದು ವೃತ್ತಿಪರ ಹೆಜ್ಜೆಯಿಡಲು ’ಬುಕ್ ಬ್ರಹ್ಮ’ ಸಂಸ್ಥೆ ನಿರ್ಧರಿಸಿದೆ.
ಇದಕ್ಕಾಗಿಯೇ ’ಸ್ವಯಂ ಪ್ರಕಾಶನ’ದ ಮೂಲಕ ಕನ್ನಡ ಸಾಹಿತ್ಯ ವಲಯದೊಳಗೆ ಪ್ರವೇಶಿಸಲು ಇಚ್ಛಿಸುವ ಲೇಖಕರಿಗೆ ’ಬಿಬಿ ಪಬ್ಲಿಕೇಷನ್ಸ್’ ಮೂಲಕ ಪೂರ್ತಿ ನೆರವು ನೀಡಲು ಸಿದ್ಧವಾಗಿದೆ.
ಕೃತಿಯ ಕುರಿತು ಸಂಪಾದಕೀಯ ಸಲಹೆ ನೀಡುವುದರಿಂದ ಹಿಡಿದು, ಪ್ರಕಟಿತ ಕೃತಿ ಪ್ರಪಂಚದಾದ್ಯಂತ ಓದುಗರನ್ನು ತಲುಪುವವರೆಗೆ ಲೇಖಕರಿಗೆ ನೆರವು ನೀಡುವುದು ’ಬಿಬಿ ಪಬ್ಲಿಕೇಷನ್ಸ್’ ಉದ್ದೇಶ.
ಯಾವುದೇ ಲೇಖಕರು ಕೃತಿಯನ್ನು ರಚಿಸುವ ಮೊದಲೇ ’ಬಿಬಿ ಪಬ್ಲಿಕೇಷನ್ಸ್’ ಸಂಪರ್ಕಿಸಿ ತಜ್ಞರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಬಹುದು. ಈ ನಿಟ್ಟಿನಲ್ಲಿ ’ಬುಕ್ ಬ್ರಹ್ಮ’ ಕಚೇರಿಗೆ ಬಂದು, ಉಚಿತವಾಗಿ ಒಂದು ಗಂಟೆ ಸಂಪಾದಕೀಯ ಮಂಡಳಿಯೊಂದಿಗೆ ಚರ್ಚೆ ಮಾಡಲು ಅವಕಾಶ ನೀಡಲಾಗುವುದು.
ಕನ್ನಡದಿಂದ ಇತರ ಭಾಷೆಗಳಿಗೆ, ಇತರ ಭಾಷೆಗಳಿಂದ ಕನ್ನಡಕ್ಕೆ ಕೃತಿಗಳ ಭಾಷಾಂತರ ಕಾರ್ಯದ ಜವಾಬ್ದಾರಿಯನ್ನು ’ಬಿಬಿ ಪಬ್ಲಿಕೇಷನ್ಸ್’ ವಹಿಸಿಕೊಳ್ಳಲು ಸಿದ್ಧವಿದೆ.
ಮೂಲ ಅಥವಾ ಭಾಷಾಂತರ ಕೃತಿಯ ಸಂಪಾದನೆ ಕಾರ್ಯದ ಜವಾಬ್ದಾರಿಯನ್ನು ’ಬಿಬಿ ಪಬ್ಲಿಕೇಷನ್ಸ್’ ವಹಿಸಿಕೊಳ್ಳುವುದು.
ಕೃತಿ ಮತ್ತು ಲೇಖಕರ ಇಚ್ಛಾನುಸಾರ ಒಳಪುಟಗಳನ್ನು ಆಕರ್ಷಕವಾಗಿ ವಿನ್ಯಾಸ ಮಾಡುವ ಕಾರ್ಯವನ್ನು ’ಬಿಬಿ ಪಬ್ಲಿಕೇಷನ್ಸ್’ನಲ್ಲಿರುವ ತಜ್ಞ ವಿನ್ಯಾಸಕಾರರು ಮಾಡುವರು.
ಕೃತಿಯ ಸಂಪಾದನೆ, ಒಳಪುಟ ವಿನ್ಯಾಸವಾದ ನಂತರ ಕರಡು ತಿದ್ದುವಿಕೆ ಅತ್ಯಂತ ಮುಖ್ಯವಾದ ಕ್ರಿಯೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ’ಬಿಬಿ ಪಬ್ಲಿಕೇಷನ್ಸ್’ ಸಂಪಾದಕೀಯ ತಂಡ ವಹಿಸಿಕೊಳ್ಳುತ್ತದೆ.
ಕನ್ನಡ ಸಾಹಿತ್ಯ ಲೋಕಕ್ಕೆ ಈಗಾಗಲೇ ಪರಿಚಯ ಇರುವ ಮತ್ತು ಪರಿಚಯ ಇರದಿರುವ ಅನೇಕ ಗುಣಮಟ್ಟದ ವಿನ್ಯಾಸಕಾರರ ಮೂಲಕ ಪ್ರತಿಯೊಂದು ಕೃತಿಗೂ ಅಚ್ಚುಕಟ್ಟಾದ- ಸೃಜನಶೀಲವಾದ ಮುಖಪುಟ ವಿನ್ಯಾಸ ಮಾಡಿಸುವ ಜವಾಬ್ದಾರಿ ಕೂಡ ’ಬಿಬಿ ಪಬ್ಲಿಕೇಷನ್ಸ್’ ಸಂಸ್ಥೆಯದ್ದೇ ಆಗಿರುತ್ತದೆ.
ಗುಣ ಮಟ್ಟ ಕಾಪಾಡಿಕೊಂಡು ಕೃತಿಯನ್ನು ಮುದ್ರಿಸುವ ಜವಾಬ್ದಾರಿ ಕೂಡ ’ಬಿಬಿ ಪಬ್ಲಿಕೇಷನ್ಸ್’ ಸಂಸ್ಥೆಯದ್ದು.
’ಬಿಬಿ ಪಬ್ಲಿಕೇಷನ್ಸ್’ ಮೂಲಕ ಪ್ರಕಟವಾದ ಪ್ರತಿಯೊಂದು ನೂತನ ಕೃತಿಯ ಕುರಿತೂ, ನಾಲ್ಕು ವಾರಗಳ ಕಾಲ (ಬಿಡುಗಡೆಗೆ ಮೊದಲು-ನಂತರ) ವ್ಯಾಪಕವಾದ ಡಿಜಿಟಲ್ ಪ್ರಚಾರ ಮಾಡಲಾಗುವುದು.
ಲೇಖಕರ ಆಯ್ಕೆಯನ್ನು ಆಧರಿಸಿ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ’ಬಿಬಿ ಪಬ್ಲಿಕೇಷನ್ಸ್’ ಸಂಸ್ಥೆಯೇ ನಡೆಸಿಕೊಡುತ್ತದೆ. ’ಬುಕ್ ಬ್ರಹ್ಮ’ ಸಾಮಾಜಿಕ ಜಾಲತಾಣದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರ ಕೂಡ ಮಾಡಲಾಗುತ್ತದೆ. ಆ ಮೂಲಕ ಬಿಡುಗಡೆಗೆ ಮೊದಲೇ ಸಾವಿರಾರು ಓದುಗರಿಗೆ ಕೃತಿಯನ್ನು ಪರಿಚಯ ಮಾಡಿಕೊಡಲಾಗುತ್ತದೆ.
’ಬಿಬಿ ಪಬ್ಲಿಕೇಷನ್ಸ್’ ಮೂಲಕ ಪ್ರಕಟವಾದ ಪ್ರತಿಯೊಂದು ಕೃತಿಯನ್ನೂ ಕನ್ನಡದ ಪ್ರಮುಖ ಪ್ರಕಟಣಾ- ವಿತರಣಾ ಸಂಸ್ಥೆಯ ಮೂಲಕ ರಾಜ್ಯದ ಬಹುತೇಕ ಪುಸ್ತಕದಂಗಡಿಗಳನ್ನು ತಲುಪಿಸಲಾಗುವುದು. ಈ ಸಂದರ್ಭದಲ್ಲಿ ಲೇಖಕ ಮತ್ತು ಪ್ರಕಟಣಾ-ವಿತರಣಾ ಸಂಸ್ಥೆಯ ನಡುವೆ ನೇರ ಒಪ್ಪಂದ ಮಾಡಿಸಿಕೊಡಲಾಗುತ್ತದೆ. ಕೃತಿಯ ಮಾರಾಟದಿಂದ ಬರುವ ವರಮಾನ ನೇರವಾಗಿ ಲೇಖಕರಿಗೆ ಹೋಗುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಕನ್ನಡದ ಪ್ರಮುಖ ಪ್ರಕಟಣಾ- ವಿತರಣಾ ಸಂಸ್ಥೆಯ ಇ-ಮಾರುಕಟ್ಟೆಯ ಜೊತೆಗೆ, ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಇ-ಮಾರುಕಟ್ಟೆಯಲ್ಲಿ ಕೂಡ ’ಬಿಬಿ ಪಬ್ಲಿಕೇಷನ್ಸ್’ ಮೂಲಕ ಪ್ರಕಟವಾದ ಪ್ರತಿಯೊಂದು ಕೃತಿ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗುತ್ತದೆ.
ಮೊದಲೇ ಕರೆ ಮಾಡಿ ಸಮಯ ನಿರ್ಧರಿಸಿಕೊಂಡು ’ಬುಕ್ ಬ್ರಹ್ಮ’ ಕಚೇರಿಗೆ ಭೇಟಿ ನೀಡಿ