ವಿನೋದ್ ಕೆ.ಎಲ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಕೆಂಚನಪುರದವರು. ತಂದೆ ಲಕ್ಕಹನುಮಯ್ಯ, ತಾಯಿ ಮಂಜಮ್ಮ. ಕನ್ನಡ ಎಂ. ಎ ಪದವಿ ಪಡೆದಿರುವ ವಿನೋದ್ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಹಲವು ನಾಟಕ ಮತ್ತು ಸಿನಿಮಾ, ಕಿರುಚಿತ್ರ, ಟೆಲಿ ಸಿನಿಮಾಗಳಲ್ಲಿ ನಟಿಸಿರುವ ವಿನೋದ್ ಬರವಣಿಗೆಯನ್ನು ತಮ್ಮ ಹವ್ಯಾಸವಾಗಿಸಿಕೊಂಡಿದ್ದಾರೆ.
‘ಆಸ್ಥೆ’ ವಿನೋದ್ ಅವರ ಮೊದಲ ಕಾದಂಬರಿಯಾಗಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದಿಂದ 2019ರ ಯುವ ಬರಹಗಾರರ ಚೊಚ್ಚಲ ಕೃತಿ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದ್ದ ಕೃತಿಯಾಗಿದೆ. ಹಾಗೇ ಅವರ ನಾಟಕ ‘ಗಾಂಧಿ ಬಂದ ಗಾಂಧಿ’, ಕವನ ಸಂಕಲನ ‘ಗಾಳಿದೀಪ’, ಕಥೆಗಳು ‘ಲಾಭಿ’, ‘ಗಣಪತಿಬಪ್ಪ ಮೊರಿಯಾ’, ‘ಸ್ವಾಭಿಮಾನಿ’ ಮತ್ತು ‘ನಾಯಿ ಹೇಳಿದ ಕಥೆ’ ಮುದ್ರಣ ಹಂತದಲ್ಲಿವೆ.