ಲೇಖಕ ವಿನೋದ ಆರ್.ಬಿ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕೆಂಚನಗುಡ್ಡ ತಾಂಡಾದವರು. ತಂದೆ ಬಾಬು ನಾಯ್ಕ್ , ತಾಯಿ : ಹೇಮಲತಾ, ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಸಿರುಗುಪ್ಪದಲ್ಲಿ ಪ್ರೌಢಶಿಕ್ಷಣ, ಪಿಯುಸಿ ಹಾಗೂ ಸದ್ಯ, ಬಳ್ಳಾರಿಯ ಕಾಲೇಜೊಂದರಲ್ಲಿ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿ. ಚುಟುಕು ಕವನಗಳು, ರಂಗಗೀತೆಗಳ ರಚನೆ ಇವರ ಹವ್ಯಾಸ. ತಾರಕ- ಇವರ ಮೊದಲ ಕಥಾ ಸಂಕಲನ.