ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಜನಿಸಿದ ವಿಜಯಲಕ್ಷ್ಮೀ ಶಿವಕುಮಾರ ಕೌಟಗೆ ಅವರು ಬಹುಮುಖ ಪ್ರತಿಭೆಯ ಲೇಖಕಿ. ಕರ್ನಾಟಕದ ಆಚೆಗೆ ಶಿಕ್ಷಣ ಪೂರೈಸಿ ಈಗ ಬೀದರ್‌ನಲ್ಲಿ ವಾಸವಾಗಿದ್ದಾರೆ. ಬಸವ ತತ್ವ ಚಿಂತನೆಗಳ ಆಧಾರದ ಮೇಲೆ ನಂಬಿಕೆ ಇಟ್ಟ ಅವರು ಭಾಲ್ಕಿಯ ಚನ್ನಬಸವಪಟ್ಟದ್ದೇವರು, ಅಕ್ಕ ಅನ್ನಪೂರ್ಣರೊಂದಿಗೆ ಈ ಭಾಗದ ಆಧ್ಯಾತ್ಮ ಪುಣ್ಯ ಪುರುಷರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ, ಆಧುನಿಕ ವಚನ, ಕಾವ್ಯ, ಲೇಖನ, ಕತೆ, ಹಾಗೂ ಶರಣ ಸಾಹಿತ್ಯ ಕುರಿತು ಸಾಹಿತ್ಯ ರಚಿಸುತ್ತಿದ್ದಾರೆ. ಕಲ್ಯಾಣ ಕದಳಿ ಅವರ ಜನಪ್ರಿಯ ಕಾದಂಬರಿ ಈ ಕೃತಿಗೆ ಗುಲಬರ್ಗಾ ವಿಶ್ವವಿದ್ಯಾಲಯ ರಾಜ್ಯೋತ್ಸವ, ಭಾಲ್ಕಿ ಹಿರೇಮಠ ಪ್ರಶಸ್ತಿ ಸೇರಿದಂತೆ ಐದು ಪ್ರಶಸ್ತಿ ಪಡೆದಿದೆ.