ಯುವ ಕಥೆಗಾರ ವಿಜಯ ಹೂಗಾರ್ ಹುಟ್ಟಿದ್ದು 1988ರಲ್ಲಿ ಬೀದರ್ ಜಿಲ್ಲೆಯ, ಬಸವಕಲ್ಯಾಣ ತಾಲೂಕಿನ ಒಟರ್ಗೆರಾ ಗ್ರಾಮದಲ್ಲಿ. ಬೆಂಗಳೂರಿನ ಆರ್‌ವಿ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಸುಮಾರು ಎಂಟು ವರ್ಷ ಐಟಿ ಕಂಪನಿಯಲ್ಲಿ ದುಡಿಮೆ. ಪ್ರಸ್ತುತ ಬೆಂಗಳೂರಿನ ವಿಪ್ರೊ ಕಂಪನಿಯಲ್ಲಿ ಟೆಕ್ ಲೀಡ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಓದುಬರಹ, ಸಿನಿಮಾ, ಮತ್ತು ಪರ್ಯಟನೆಗಳ ಒಲವು ಹೆಚ್ಚು. ಅವರ ಹಲವಾರು ಕಥೆಗಳು ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ’ಒಂದು ಖಾಲಿ ಖುರ್ಚಿ’ ಮೊದಲ ಕಥಾ ಸಂಕಲನ.