About the Author

ವೇಣುಗೋಪಾಲ ಸೊರಬ ಅವರು 1937 ನವೆಂಬರ್ 29ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಜನಿಸಿದರು. ಇವರ ಪೂರ್ಣ ಹೆಸರು ಸೊರಬ ರಾಮರಾವ್ ವೇಣುಗೋಪಾಲ. ಚಳ್ಳಕೆರೆ ಹಾಗೂ ಹರಿಹರದಲ್ಲಿ ಪ್ರಾಥಮಿಕ  ಶಿಕ್ಷಣ ಪಡೆದ ಇವರು ಶಿವಮೊಗ್ಗದ ಸದ್ಯಾದ್ರಿ ಕಾಲೇಜಿನಲ್ಲಿಇಂಟರ್‌ಮೀಡಿಯೇಟ್‌ ಶಿಕ್ಷಣ ಪಡೆದರು. 

ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನಕಪುರದ ರೂರ್‌ ಕಾಲೇಜಿನಲ್ಲಿ ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿಯೂ ಅಧ್ಯಾಪಕರಾಗಿ ಸೇವೆಸಲ್ಲಿಸಿ ನಿವೃತ್ತರಾದರು. 

12 ಕವನ ಸಂಕಲನಗಳು, 5 ಕಾದಂಬರಿಗಳು, 1 ಕಥಾ ಸಂಕಲನ, 1 ಪ್ರಬಂಧ ಸಂಕಲನವನ್ನು ಮಾಡಿದ್ದಾರೆ. 'ಧಾರೆ', 'ಪ್ರಮೇಯ', 'ಮಾನವಿ', ಅವರ ಪ್ರಮುಕ ಕವನ ಸಂಗ್ರಹಗಳಾದರೆ, 'ಜೀವ ಜೀವಂತ', 'ಲೂಸಿ', 'ಸವಾಲು', 'ಸುಳ್ಳು ಬುರುಕಿ', 'ಹೂ ಹಿಗ್ಗು' ಅವರ ಇನ್ನಿತರ ಕವನ ಸಂಗ್ರಹಗಳಾಗಿವೆ. ಹಿರಿಯ-ಕಿರಿಯ ಕವಿಗಳ ವ್ಯಕ್ತಿ ಚಿತ್ರಗಳ ಕವಿತೆಗಳು 'ಬಿಂಬ' ಸಂಗ್ರಹದಲ್ಲಿವೆ. 'ಉತ್ಸವ' ಅವರ ಕಥಾ ಸಂಕಲನವಾಗಿದೆ. 'ಕನಕಪುರ ತಾಲ್ಲೂಕು ದರ್ಶನ', 'ಸಮಕಾಲೀನ ಪಡೆ ನುಡಿ' ಅವರ ಇನ್ನಿತರ ಕೃತಿಗಳಾಗಿವೆ. 'ಬಯಲಾಗದ ಜನ',  'ಸರೀಕರು', 'ಅನಾಥ ಪ್ರಭು', 'ಪ್ರಸಂಗ', 'ಸಾಲುಗಳೇ ಇಲ್ಲ' ಅವರು ಬರೆದ ಕಾದಂಬರಿಗಳಾಗಿವೆ.

ಇವರ ಗರಿ ಮುರಿದ ಹಕ್ಕಿಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. 1995 ಮಾರ್ಚ್‌ 29‌ರಂದು ಇವರು ನಿಧನರಾದರು. 

 

ವೇಣುಗೋಪಾಲ ಸೊರಬ

(29 Nov 1937-29 Mar 1995)