ವೀಣಾ ಕೆ. ಆರ್. ಅವರು ಮೂಲತಃ ಮೊಳಕಾಲ್ಮೂರು ತಾಲೂಕಿನವರು. ಪ್ರೌಢ ಶಿಕ್ಷಣವನ್ನು ಮತ್ತು ಪಿ.ಯು.ಸಿಯನ್ನು ಮೊಳಕಾಲ್ಮೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಬಿ.ಎ ಪದವಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಡೆದಿದ್ದಾರೆ. ಸಮಾಜಶಾಸ್ತ್ರ ವಿಷಯದಲ್ಲಿ ಕರ್ನಾಟಕ ರಾಜ್ಯ ಉಪಾನ್ಯಾಸಕರ ಅರ್ಹತೆ ಪರೀಕ್ಷೆಯನ್ನು ಪಾಸುಮಾಡಿದ್ದು, ಪ್ರಸ್ತುತ ಕನ್ನಡ ವಿಶ್ವವಿದ್ಯಾಲಯ, ಹಂಪಿ ಬುಡಕಟ್ಟು ಅಧ್ಯಯನ ವಿಭಾಗದಲ್ಲಿ “ಮ್ಯಾಸಬೇಡರ ರೊಪ್ಪಗಳು: ಪರಂಪರೆ ಮತ್ತು ವರ್ತಮಾನ” ಎಂಬ ವಿಷಯದ ಮೇಲೆ ಸಂಶೋಧನೆಯನ್ನು ಕೈಗೊಂಡಿರುತ್ತಾರೆ. ಕೃತಿಗಳು: ‘ಮ್ಯಾಸರ ಜಾಡು’