About the Author

ವೇದಾ ಆಠವಳೆ ಅವರ ಹುಟ್ಟೂರು ಉಡುಪಿ ಜೆಲ್ಲೆಯ ಮಾಳ ಗ್ರಾಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪಡೆದ ಅವರು ನಂತರ ಟೆಲಿಕಮ್ಯುನಿಕೇಷನ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದರು. ಕೆಲ ಕಾಲ ಅದೇ ಕ್ಷೇತ್ರದಲ್ಲಿ ಕೆಲಸ ಮಾಡಿದರು.ನಂತರ ಸಂಸ್ಕೃತ ಭಾರತಿ ಸಂಸ್ಥೆಯಲ್ಲಿ ಅಲ್ಪಾವಧಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಸಂಸ್ಕೃತದಲ್ಲಿ ಎಂ.ಎ ಮತ್ತು ಬಿ.ಎಡ್ ಪದವಿ ಪಡೆದರು. ಕಳೆದ ಹದಿನಾಲ್ಕು ವರ್ಷಗಳಿಂದ ಬೆಂಗಳೂರಿನ ಅನೇಕ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡಿರುವ ಅವರು ಪ್ರಸ್ತುತ ಡೆಲ್ಲಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಕೃತ ಶಿಕ್ಷಕಿಯಾಗಿದ್ದಾರೆ. ಬಿಡುವಿನ ವೇಳೆಯಲ್ಲಿ ಕನ್ನಡ ಓದು- ಬರವಣಿಗೆ ಇವರ ಹವ್ಯಾಸ. ತಮ್ಮ ಬ್ಲಾಗ್ ’ಅಂತರ್ ದೃಷ್ಟಿ’ಯ ಮೂಲಕ ಮಹಿಳೆಯರ ಮತ್ತು ಮಕ್ಕಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಸಾಮಾಜಿಕ ವಿಚಾರಗಳ ಬಗ್ಗೆ ವಸ್ತುನಿಷ್ಠವಾಗಿ ಸ್ಪಂದಿಸಲು ಬಯಸುವ ವೇದಾ ಅವರು ಉದಯಲಾಲ್‌ ಪೈ ಅವರ ಕೃತಿಯನ್ನು ’ನಾನು ಹಿಂದೂ! ಏಕೆ?’ ಎಂಬ ಶೀರ್ಷಿಕೆಯ ಅಡಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.

 

ವೇದಾ ಆಠವಳೆ

(22 Jul 1972)