`ದೇವರು ಸತ್ತ' ಕೃತಿಯ ಮೂಲಕ ತಮ್ಮ ಪ್ರಖರ ವೈಚಾರಿಕತೆಯ ವ್ಯಕ್ತಿತ್ವವನ್ನು ತೋರಿದ ವಸುದೇವ ಭೂಪಾಲಂ ಅವರು ಸಾಹಿತ್ಯದ ಇತರೆ ಪ್ರಕಾರಗಳಲ್ಲೂ ಕೃಷಿ ಮಾಡಿದ್ದಾರೆ. ಸಿಡಿಲು, ಒಲವಿನ ಉಪವನ, ಆಳೌ ಕರ್ಣಾಟಕ ದೇವಿ, ಹೆಣ್ಣು (ಕಥೆ-ಕಾದಂಬರಿಗಳು), ತ್ರಿಶೂಲ, ಕಮ್ಮಟವಲ್ಲಭ ಹಾಗೂ ಕಾಲೇಜು ಹುಡುಗಿ (ನಾಟಕಗಳು), ಗೊಂಚಲ್ ಮಿಂಚು, ಸ್ವಾತಂತ್ಯ್ರವೀರರು (ಜೀವನ ಚರಿತ್ರೆ) ಹೊಸಹಾಡು, ಪ್ರಳಯ ದುಂದುಭಿ, ರಂಜನ (ಕವಿತೆಗಳು), ಹೂ, ಹಹಹ್ಹಾ, ಗುಮ್ಮ ಬಂತು (ಶಿಶುಗೀತೆಗಳು).