ವಿ. ಜಿ. ಭೂಸನೂರಮಠ (ವೀರಭದ್ರಯ್ಯ ಜಿ. ಭೂಸನೂರಮಠ) ಅವರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದವರು. ತಂದೆ ಗುರುಶಾಂತಯ್ಯ ತಾಯಿ ಸುವರ್ಣ. ಇವರ ಮನೆತನ ಸಂಗೀತದ್ದು. ಹೀಗಾಗಿ, ವೀರಭದ್ರಯ್ಯನವರಿಗೆ ಸಂಗೀತಾಸಕ್ತಿ ಸಹಜವಾಗಿ ಆಕರ್ಷಿಸಿದೆ. ಸಂಗೀತದಲ್ಲಿ ಹಾಗೂ ಕನ್ನಡ ಮತ್ತು ಜಾನಪದ ಸಾಹಿತ್ಯದಲ್ಲಿ ಎಂ ಎ ಸ್ನಾತಕೋತ್ತರ ಪದವೀಧರರು.