ಇತಿಹಾಸ ಪ್ರಾಧ್ಯಾಪಕರಾಗಿ ದುಡಿದು ನಿವೃತ್ತರಾಗಿರುವ ಪ್ರೊ. ಎಂ. ಅರ್ತಿಕಜೆ ಅವರು ಇತಿಹಾಸ ಮತ್ತು ಕನ್ನಡ ಭಾಷೆ ಎರಡರಲ್ಲೂ ಸ್ನಾತಕೋತ್ತರ ಪದವಿಗಳನ್ನು ಚಿನ್ನದ ಪದಕ ಮತ್ತು ಪ್ರಥಮ ಸ್ಥಾನದೊಂದಿಗೆ ಗಳಿಸಿದವರು. ಅವರ ಆಸಕ್ತಿಯ ಕ್ಷೇತ್ರ ಅಧ್ಯಾಪನ, ಪತ್ರಿಕೋದ್ಯಮ ಮತ್ತು ಸಾಹಿತ್ಯ, ನಾಲ್ಕಾರು ಪತ್ರಿಕೆಗಳಿಗೆ ದೀರ್ಘಕಾಲ ವರದಿಗಾರರಾಗಿ ದುಡಿದ ಅವರು ಜನಪ್ರಿಯ ಅಂಕಣಕಾರರೂ ಹೌದು. 'ಹೀಗೊಂದು ವೃತ್ತಾಂತ', 'ಮಾರ್ದನಿ', 'ಹಾಸ್ಯೋಲ್ಲಾಸ', 'ಜೇನುಹನಿ', 'ಅನನ್ಯ ಸಾಧಕರು' ಅವರ ಪ್ರಕಟಿತ ಕೃತಿಗಳು. ತನ್ನ ಆಡುಭಾಷೆ ಹವ್ಯಕವನ್ನು ಅಂಕಣದಲ್ಲಿ ಉಪಯೋಗಿಸಿದ, ಆ ಭಾಷೆಯಲ್ಲೇ ಸಾಹಿತ್ಯ ಸೃಷ್ಟಿಸಿದ ಹಿರಿಮೆ ಅವರದು.