ಉಮೇಶ್ ತೆಂಕನಹಳ್ಳಿ ಅವರು ಮೂಲತಃ ಚನ್ನರಾಯಪಟ್ಟಣದವರು. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ರಂಗಭೂಮಿಯಲ್ಲಿ ತರಬೇತಿ ಪಡೆದಿರುವ ಇವರು ಕೆಲ ನಾಟಕಗಳನ್ನು ರಚಿಸಿ ರಂಗದ ಮೇಲೆ ತಂದಿದ್ದಾರೆ. ಅಷ್ಟೇ ಅಲ್ಲದೆ ದಶಕಗಳಿಂದಲೂ ಯುವಜನತೆ ಹಾಗೂ ಮಕ್ಕಳಿಗಾಗಿ ಜನಪದ ನೃತ್ಯ ಪ್ರಕಾರಗಳನ್ನು ಕಲಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.