About the Author

ಲೇಖಕಿ ಡಾ. ಉಮಾದೇವಿ ದಂಡೋತಿ ಮಟ್ಟಿ ಅವರು ಮೂಲತಃ ಕಲಬುರಗಿಯವರು. ತಂದೆ ರುಕ್ಕಪ್ಪ ತಾಯಿ ನಾಗಮ್ಮ. ಪ್ರಾಥಮಿಕ ಶಿಕ್ಷಣದಿಂದ ಎಂ.ಎ. ಸ್ನಾತಕೋತ್ತರ ಪದವಿವರೆಗೂ ಕಲಬುರಗಿಯಲ್ಲೇ ಶಿಕ್ಷಣ ಪಡೆದರು. ‘ತ್ರಿವೇಣಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು’ ವಿಷಯವಾಗಿ (1996) ಎಂ.ಫಿಲ್ ಪದವಿ ಹಾಗೂ ಶೂದ್ರ ವಚನಕಾರ್ತಿಯರು’ (2003) ವಿಷಯವಾಗಿ  ಗುಲಬರ್ಗಾ ವಿ.ವಿ.ಗೆ ಮಹಾಪ್ರಬಂಧವನ್ನುಸಲ್ಲಿಸಿ ಪಿ.ಎಚ್.ಡಿ ಪಡೆದರು ಇವರ ‘ತತ್ವಪದಗಳ ಸಂಗ್ರಹ’ ಕೃತಿಯು ಗುಲಬಗಾ ವಿವಿ ಮೂರನೇ ಬಿ.ಕಾಂ. ವಿದ್ಯಾರ್ಥಿಗಳೀಗೆ ಪಠ್ಯವಾಗಿದೆ.

ಸಿರಿಗನ್ನಡ ವೇದಿಕೆಯ ಯಾದಗಿರಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರು, ಕರ್ನಾಟಕ ದಲಿತ ಸಾಹಿತ್ಯ  ಪರಿಷತ್ತಿನ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿಯಾಗಿ, ಹರಿದಾಸ ಸಾಹಿತ್ಯ ಪೀಠದ ಸದಸ್ಯರಾಗಿರುವುದೂ ಸೇರಿದಂತೆ ಹತ್ತು ಹಲವು ಸಂಘಟನೆಗಳಲ್ಲಿ ವಿವಿಧ ಸ್ಥಾನಗಳನ್ನು ನಿರ್ವಹಿಸಿದ್ದಾರೆ. ಸದ್ಯ, ಯಾದಗಿರಿ ಜಿಲ್ಲೆಯ ಸುರಪುರದ ಡಾ. ಆಂಬೇಡ್ಕರ್ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ.

ಕೃತಿಗಳು: ತತ್ವಪದಗಳ ಸಂಗ್ರಹ, ಶೂದ್ರ ವಚನಕಾರ್ತಿಯರು, 

ಉಮಾದೇವಿ ದಂಡೋತಿ ಮಟ್ಟಿ

(10 May 1968)