ಲೇಖಕಿ ಡಾ. ಉಮಾ ವೆಂಕಟೇಶ್ ಅವರ ಬಾಲ್ಯ ಕಳೆದಿದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದೆಲ್ಲವೂ ಮೈಸೂರಿನಲ್ಲಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರದಲ್ಲಿ ಡಾಕ್ಟರೇಟ್ ಪದವೀಧರರು. ಎಂಟು ವರ್ಷ ಕಾಲ ಉಪನ್ಯಾಸಕಿಯಾಗಿ ಕೆಲಸ ನಿರ್ವಹಣೆ ನಂತರ 1996ರಿಂದ ಪತಿ ಹಾಗೂ ಮಕ್ಕಳೊಂದಿಗೆ ಯೂನೈಟೆಡ್ ಕಿಂಗ್ ಡಮ್ ನಲ್ಲಿಯ ಕಾರ್ಡಿಫ್ ನಗರದಲ್ಲಿ ವಾಸವಿದ್ದಾರೆ. ಅಮೆರಿಕೆಯ ಪೆನ್ ಸ್ಟೇಟ್ ವಿಶ್ವವಿದ್ಯಾಲಯದ ಸಸ್ಯತಳಿಶಾಸ್ತ್ರ ವಿಭಾಗದಲ್ಲಿ ಸಂಶೋಧಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯು.ಕೆ. ಕನ್ನಡ ಬಳಗದ ಸಾಹಿತ್ಯ ವೇದಿಕೆ ‘ಆದಿವಾಸಿ’ ಜಾಲಜಗುಲಿಯ ಸ್ಥಾಪನೆ ಹಾಗೂ ವೇದಿಕೆಯ ಕಾರ್ಯಚಟುವಟಿಕೆಗಳಲ್ಲಿ ನಿರತರು. ವಿಜ್ಞಾನದ ಹಲವಾರು ಲೇಖನಗಳನ್ನು ಬರೆಯುತ್ತಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತ, ಗಮಕ ಗಾಯನ, ಚಲನಚಿತ್ರ ವೀಕ್ಷಣೆ, ಸಸ್ಯೋಧ್ಯಾನಗಳಿಗೆ ಭೇಟಿ, ವಿಜ್ಞಾನ ಪುಸ್ತಕ ಹಾಗೂ ಕಾದಂಬರಿಗಳನ್ನು ಓದುವುದು ಇವರ ಹವ್ಯಾಸ.