ಕತೆಗಾರ, ಕವಯತ್ರಿ ಉಳುವೆ ಕೆ. ಶಾರದಾ ಅವರು ಜನಿಸಿದ್ದು 10-10-1970 ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಉಳುವೆಯಲ್ಲಿ. ತಂದೆ ಕೃಷ್ಣಮೂರ್ತಿ ಎಸ್., ತಾಯಿ ನಾಗರತ್ನ.
‘ಸುಪ್ರಭಾತ (1993), ಬ್ರಹ್ಮಗಂಟು (1994), ಪ್ರಣಯ ಫಣಿಬಂಧನ (1997), ಹೊಸಹಾದಿಯಲ್ಲಿ(1996), ಝಣಝಣ ರೂಪಾಯಿ (1998), ಚಂದ್ರೋದಯ (1997), ಮಾತೃಕಸ್ಯೆ (19997), ನನಸಾದ ಕನಸು (1998), ಮನಸು ಕೊಟ್ಟವಳು (2000) ಅವರ ಪ್ರಕಟಿತ ಕಾದಂಬರಿಗಳು. ‘ನೆನಪಿನ ಕೋಲು’ ಕಥಾ ಸಂಕಲನ 2001, `ನಿಸರ್ಗದ ಮಡಿಲು' ಕವನ ಸಂಕಲನ 2005ರಲ್ಲಿ ಪ್ರಕಟವಾಗಿದೆ.
ಅವರ ಸಾಹಿತ್ಯ ಸೇವೆಗೆ `ಅಳಸಿಂಗ ಪ್ರಶಸ್ತಿ (1998), ಅತ್ತಿಮಬ್ಬೆ ಉದಯೋನ್ಮುಖ ಪ್ರಶಸ್ತಿ (ಅತ್ತಿಮಬ್ಬೆ ಪ್ರತಿಷ್ಠಾನ) (1994), ಕೃನಾ ಮೂರ್ತಿ ಪ್ರಶಸ್ತಿ (1995), ರಾಜ್ಯ ಉದಯೋನ್ಮುಖ ಲೇಖಕಿ (ಲೇಖಕಿಯರ ಸಂಘ ಹಾಸನ-1995) ಮುಂತಾದ ಗೌರವ ಪ್ರಶಸ್ತಿಗಳು ಸಂದಿದೆ.