ಡಾ. ತುಮಕೂರು ನಾಗಭೂಷಣ ಅವರು ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಹಿರಿಯ ಶಸ್ತ್ರಚಿಕಿತ್ಸಕರಾಗಿದ್ದಾರೆ. ಬೆಂಗಳೂರಿನ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಭೇಟಿ ನೀಡಿ ರೋಗಿಗಳನ್ನು ಉಪಚರಿಸುತ್ತಿದ್ದಾರೆ. ಬೆಂಗಳೂರಿನ ವಾಸವಿ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪೂರೈಸಿ, ವೈದ್ಯಕೀಯ ಶಿಕ್ಷಣವನ್ನೂ ಪೂರ್ಣಗೊಳಿಸಿ ನಂತರ ಯುನೈಟೆಡ್ ಕಿಂಗ್ ಡಮ್ ನಲ್ಲಿ ಎಫ್ ಆರ್ ಸಿಎಸ್ ಪೂರ್ಣಗೊಳಿಸಿದರು. ‘ಸೃಜನಶೀಲ ಸಂಶೋಧಕ-ಚಿಂತಕ ಲೂಯಿ ಪಾಶ್ಚರ್’ ಎಂಬ ಕೃತಿ ಬರೆದಿದ್ದಾರೆ.