ಟೀನಾ ಹುಟ್ಟಿದ್ದು ಬೆಳೆದಿದ್ದು ಮತ್ತು ಓದಿದ್ದೆಲ್ಲಾ ಮಲೆನಾಡಿನ ಸುಂದರ ಪರಿಸರದಲ್ಲಿ. ನಂತರ ಅವರ ಬದುಕು ಬಯಲು ಸೀಮೆಯತ್ತ ನಡೆದು ತುಮಕೂರು, ಮೈಸೂರು ಸುತ್ತಿ ಇದೀಗ ಬೆಂಗಳೂರಿನಲ್ಲಿ ನೆಲೆ ನಿಂತಿದೆ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ. ಓದಿದ ಟೀನಾ ಅಚಾನಕ್ಕಾಗಿ ಪತ್ರಿಕೆಗಳಲ್ಲಿ ಫ್ರೀಲಾನ್ಸ್ ಆಗಿ ಬರೆಯತೊಡಗಿ ಈಗ ಇಂಗ್ಲೀಷ್ ದಿನಪತ್ರಿಕೆಯಲ್ಲಿ ಪೂರ್ಣಾವಧಿ ಪತ್ರಕರ್ತರಾಗಿಬಿಟ್ಟಿದ್ದಾರೆ.
ಆಪಾರ ಓದು ಮತ್ತು ಆಸಕ್ತಿಗಳಿರುವ ಇವರು ಬರೆದಿದ್ದು ಕಡಿಮೆಯೇ, ಆದರೆ ಮಾತಿಗೆ ಕುಳಿತಾಗ ಮಾತ್ರ ಮೂಗಿನ ಮೇಲೆ ಬೆರಳಿಡುವಂತೆ ಬೆರಗುಗೊಳಿಸಬಲ್ಲರು...ಆಳದ ಓದು, ಪತ್ರಿಕೋದ್ಯಮದ ಜೊತೆ ಜೊತೆಗೆ ಕಾವ್ಯದ ಒಡನಾಟವಿರುವ ಟೀನಾ ಚಂದದ ಕವಿತೆಗಳನ್ನೂ ಬರೆಯುತ್ತಾರೆ.