About the Author

ಜಾನಪದ ತಜ್ಞ, ಪ್ರಾಧ್ಯಾಪಕರಾದ ಟಿ.ಆರ್‌. ಮಹಾದೇವಯ್ಯನವರು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದವರು. ತಾಯಿ ಹೊನ್ನಮ್ಮ. ತಂದೆ ರುದ್ರಯ್ಯ. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಉಪಸಂಪಾದಕರಾಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಕೋಶದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಕಾಲೇಜು ದಿನಗಳಿಂದಲೇ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ ಕಾವ್ಯಾನಂದ ಪುರಸ್ಕಾರ, ಸಾಹಿತ್ಯ ಶ್ರೀ ಪ್ರಶಸ್ತಿ, ಕಿಟ್ಟಲ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. 

ಇವರ ಪ್ರಮುಖ ಕೃತಿಗಳು: ಶಾಂತಿನಾಥಕವಿ, ಗುಬ್ಬಿಯ ಮಲ್ಲಣಾರ್ಯ, ಸಿದ್ಧರಾಮಣ್ಣ, ಬಾಲಮಹಂತ, ಬಸವಣ್ಣ, ಮಲ್ಲಿಕಾರ್ಜುನ ಶಿವಯೋಗಿಗಳು, ಡಿ.ಎಂ. ಚಂದ್ರಶೇಖರ್, ಸೋಮಶೇಖರರಾವ್‌ (ಜೀವನ ಚಿತ್ರ). ಚಿಂತನ ಚಿಲಮೆ, ಚಿಂತನ ಲಹರಿ, ಚಿಂತನ ಬಾಗಿನ, ಚಿಂತನ ತಾಂಬೂಲ, ಚಿಂತನ ಸೌಭಾಗ್ಯ, ಚಿಂತನಮಾಲೆ, ಚಿಂತನ ಕಿರಣ (ಚಿಂತನಾ ಸಾಹಿತ್ಯ). ನಾಂದಿ, ದಲಿತೋದಯ, ಶರಣ ತತ್ತ್ವಚಿಂತನ, ಉಪನ್ಯಾಸಮಾಲೆ, ಸಮರ್ಪಣೆ, ಸಿದ್ಧರಾಮ ಶ್ರೀವಾಣಿ, ನಿರ್ವಾಣಶ್ರೀ (ಸಂಪಾದಿತ). ಕನ್ನಡ-ಕನ್ನಡ ನಿಘಂಟು, ಕನ್ನಡ ಜಾನಪದ ಕೋಶ, ಕನ್ನಡ ಸಂಕ್ಷಿಪ್ತ ಪದಕೋಶ, ಕಾನೂನು ಪದಕೋಶ, ಸಚಿತ್ರ ಶಾಲಾ ನಿಘಂಟಿನ ಸಂಪಾದಕರು. ಇತರೆ-ಬುದ್ಧ-ಬಸವ, ಸರ್ವಾಚಾರ ಸಂಪದ, ಪ್ರೌಢದೇವರಾಯ, ಗುಬ್ಬಿ ತಾಲ್ಲೂಕು ದರ್ಶನ ಮುಂತಾದವು. 

 

ಟಿ.ಆರ್‌. ಮಹಾದೇವಯ್ಯ