ಲೇಖಕಿ, ಸುಶೀಲಾ ಕಮತಗಿ ಅವರು ಮೂಲತಃ ಗದಗದವರು. ಓದಿದ್ದು 9ನೇ ತರಗತಿಯಾದರೂ ಸಾಹಿತ್ಯ ರಚನೆಯಲ್ಲಿ ಮಹತ್ವದ ಕೃಷಿ ಮಾಡಿದವರು. ಇವರ ತಂದೆ- ಕೊಟ್ರಪ್ಪ ಇಂಗಳಳ್ಳಿ, ತಾಯಿ- ತ್ವಾಟಪ್ಪ ಕೋ. ಕತೆಗಾರ್ತಿ, ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿದ್ದ ಸುಶೀಲಾ ಅವರು ಆಧಾರ ಎಂಬ ಕಥಾ ಸಂಕಲನ, ಕಾಡಬೆಳದಿಂದಗಳು, ಬಿರಿದ ಮೊಗ್ಗು, ತ್ಯಾಗ, ಕತ್ತಲೆ ಕರಗುವ ಮುನ್ನ ಅವರ ಪ್ರಮುಖ ಕಾದಂಬರಿಗಳು. ಸುಶೀಲಾ ಕಮತಗಿ ಅವರು 2004ರಲ್ಲಿ ನಿಧನರಾದರು.