ದಕ್ಷಿಣ ಕನ್ನಡ ಜಿಲ್ಲೆಯ ಕೋಟ್ಟೇಶ್ವರದಲ್ಲಿ 1932 ಏಪ್ರಿಲ್ 13 ಜನಿಸಿದ ಸೂರ್ಯನಾರಾಯಣರಾವ್ ಚಡಗ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿರಪರಿಚಿತರು. ತಂದೆ ನಾರಾಯಣ ಚಡಗ, ತಾಯಿ ಶೇಷಮ್ಮ.
30ಕ್ಕೂ ಹೆಚ್ಚು ಕಾದಂಬರಿ, 3 ಸಣ್ಣ ಕಥಾ ಸಂಕಲನ, ಕಾಮಧೇನು, ನಗೆ ನಂದನ, ಸುಹಾಸ, ದಿಗಂತ ಮತ್ತು ಮೆಚ್ಚಿನ ಕನ್ನಡ ಬರಹಗಾರರು ಹಾಗೂ ಮೂರು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ಕಾವೇರಿ, ಕ್ಷಮೆ ಇರಲಿ ಪ್ರಭುವೆ, ಸೀಮಂತಿ, ಅಮರಸರಸ್ವತಿ, ಬಂಗಾಲಕ್ಷ್ಮೀ ಧರ್ಮ, ಕರ್ಮ, ಹೃದಯರಾಣಿ ಕಾದಂಬರಿಗಳು. ‘ಕಾಮಧೇನು, ನಗೆನಂದನ’ - ಅವರ ಸಂಪಾದಿತ ಕೃತಿ. ‘ಜಯದೇವಿತಾಯಿ’ (ಜಯದೇವಿತಾಯಿ ಲಿಗಾಡೆ), ‘ಕಾರಂತ ಕೊಂಗಾಟೆ (ಶಿವರಾಮ ಕಾರಂತರು), ‘ಸೃಜನ’ (ಡಿ. ವೀರೇಂದ್ರ ಹೆಗಡೆ) ಸಂಭಾವನ ಗ್ರಂಥಗಳನ್ನು ಸಂಪಾದಿಸಿದ್ದಾರೆ. ಅವರಿಗೆ ಅರ್ಪಿಸಿದ ಗೌರವ ಗ್ರಂಥ ‘ಸಡಗರ. ಅವರು 2006 ವಂಬರ್ 14ರಂದು ಲಿಂಗೈಕ್ಯರಾದರು.