ಲೇಖಕ ಡಾ. ಸೂರ್ಯಕಾಂತ ಪಾಟೀಲರು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಸರಸಂಬಾ ಗ್ರಾಮದವರು. ಎಂ.ಎ.ಪಿಹೆಚ್.ಡಿ (ಕನ್ನಡ), ಎಲ್.ಎಲ್.ಬಿ. ಪದವೀಧರರು. ಕಲಬುರಗಿ (ಉತ್ತರ ವಲಯ) ಬಂಡನಕೇರಾ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು. ಶಿವಶರಣ ಪಾಟೀಲ ಜಾವಳಿ, ಬದುಕು - ಬರಹ ವಿಷಯವಾಗಿ ಪಿಎಚ್ ಡಿ ಪಡೆದಿದ್ದಾರೆ.
ಕೃ ತಿಗಳು : ಶಿವಶರಣ ಪಾಟೀಲ ಜಾವಳಿ ಬದುಕು - ಬರಹ (ಸಂಶೋಧನೆ) , ಬೆವರು--ಕಲಬುರಗಿ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ -2007) ಪ್ರಣತಿ -ಕಲಬುರಗಿ ಜಿಲ್ಲಾ11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಕಟಣೆ-2010, ಜಿಲ್ಲಾ ಪ್ರಾತಿನಿಧಿಕ ಕವಿತೆ ಸಂಕಲನ (ಸಂ), ನಮ್ಮೂರ ಹಿರಿಮೆ ಕಲಬುರಗಿ ಜಿಲ್ಲಾ17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆ -2018 (ಸಂ) , ಒಡಲ ಧ್ವನಿ--ನ್ನಡ ಸಾಹಿತ್ಯ ಪರಿಷತ್ತಿನ 101ನೇ ವಷ೯ದ ಸಂಭ್ರಮಾಚರಣೆ ಕೃತಿ. ಜಿಲ್ಲಾ ಪ್ರಾತಿನಿಧಿಕ ಕವಿತೆ ಸಂಕಲನ (ಸಂ),
ಭಾವೈಕ್ಯ ಬಂಧ, ಆಳಂದೆ ಸಾಸಿರ ನಾಡು, ನಮ್ಮೂರ ಹಿರಿಮೆ ,ಬಿಸಿಲು ನಾಡಿನ ಬುಗ್ಗೆಗಳು,ಹೀಗೆ ವಿವಿಧ ಲೇಖನಗಳು ಸ್ಮರಣ ಸಂಚಿಕೆ, ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯಿಕ,ಸಂಘಟನಾತ್ಕಕ ಹಾಗೂ ಪತ್ರಿಕಾ ಸೇವೆ ಸಲ್ಲಿಸಿದ್ದಾರೆ. ಬಸವ ಕೇಂದ್ರ ಸಮಿತಿಯ ಸದಸ್ಯರು, ಜಿಲ್ಲಾ ಉದಯೋನ್ಮುಖ ಬರಹಗಾರ ಬಳಗದ ಕಾಯ೯ದಶಿ೯- ಗೌರವಾಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷರಾಗಿ, ಆಳಂದ ಸಾಂಸ್ಕೃತಿಕ ವೇದಿಕೆಯ ಜಂಟಿ ಕಾಯ೯ದಶಿ೯ ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೆ. ದೂರದಶ೯ನದಲ್ಲಿ ಯುಗಾದಿ ಕವಿಗೋಷ್ಟಿ . ಆಕಾಶವಾಣಿಯಲ್ಲಿ ಇವರ ನಾಟಕಗಳು ಪ್ರಸಾರವಾಗಿವೆ.