ಲೇಖಕ ಸೂರ್ಯ ಪ್ರಸಾದ್ ಕುಲಕರ್ಣಿ ಅವರು ಸೂರ್ಯಸಖ ಎಂಬ ಕಾವ್ಯನಾಮದಿಂದ ಬರಹ , ಕವನ , ಲೇಖನಗಳನ್ನು ಬರೆಯುತ್ತಾರೆ. ಮೂಲತಃ ಬೆಳಗಾವಿಯವನು.ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ ಪೂರೈಸಿದ ಇವರು ಜನಿಸಿದ್ದು ಏಪ್ರಿಲ್ 4, 1981ರಂದು.ತಂದೆ ನಾರಾಯಣ ಕುಲಕರ್ಣಿ. ತಾಯಿ ಲಕ್ಷ್ಮಿ ಕುಲಕರ್ಣಿ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇರುವ ಇವರು ಖಾಸಗಿ ಶಾಲೆಯೊಂದರಲ್ಲಿ ಉಪಾಧ್ಯಾಯನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಲ್ಲಿ ಇವರ ಕಥೆ , ಕವನ , ಲೇಖನಗಳು ಪ್ರಕಟಗೊಂಡಿವೆ.
ಕೃತಿಗಳು - ಸೂರ್ಯನ್ ಪರ್ಪಂಚ ( ಕಾದಂಬರಿ. 2022 ) ಪ್ರಹರಿ ( ಕವನ ಸಂಕಲನ. 2022 ) ಪ್ರಶಸ್ತಿ - ಚೇತನ ಪ್ರಕಾಶನದಿಂದ ರಾಜ್ಯೋತ್ಸವ ಪ್ರಶಸ್ತಿ.ಬೆಳಕು ಸಂಸ್ಥೆಯಿಂದ ಸಾಹಿತ್ಯ ರತ್ನ ಪ್ರಶಸ್ತಿ.