ಸೂರಾಲು ದೇವಿಪ್ರಸಾದ ತಂತ್ರಿ ಹುಟ್ಟಿದ್ದು ಉಡುಪಿ ಜಿಲ್ಲೆಯ ಚಾರಿತ್ರಿಕ ಸ್ಥಳವಾದ ಸೂರಾಲು ಎಂಬ ಪುಟ್ಟಹಳ್ಳಿಯಲ್ಲಿ. ತಂದೆ ಜನಾರ್ದನ ಭಟ್ ತಂತ್ರಿಗಳು ಮತ್ತು ತಾಯಿ ಜಯಲಕ್ಷ್ಮಿ ಇವರ ಆರನೇ ಮಗನಾಗಿ 1976ರಲ್ಲಿ ಜನಿಸಿದರು. ಅಜ್ಜ ದಿ.ರಾಮಣ್ಣಭಟ್, ತಂತ್ರಿಗಳು ಸೂರಾಲು ಅರಮನೆಯ ಆಸ್ಥಾನ ವಿದ್ವಾಂಸರಾಗಿದ್ದವರು.
ಪ್ರಾಥಮಿಕ ಪ್ರೌಢ ಶಿಕ್ಷಣದ ತರುವಾಯ ವೇದ, ಸಾಹಿತ್ಯ, ಆಗಮ, ಜ್ಯೋತಿಷ್ಯಗಳಿಗಾಗಿ ಶೃಂಗೇರಿ, ಕಾಂಚಿ, ಬೆಂಗಳೂರು, ಕೇರಳದಲ್ಲಿ ಅನುಕ್ರಮವಾಗಿ ಅಧ್ಯಯನ ಮಾಡಿರುವ ದೇವಿಪ್ರಸಾದ ತಂತ್ರಿಯವರು ಚರಿತ್ರೆ, ಇತಿಹಾಸಗಳ ಬಗ್ಗೆ ವಿಶೇಷ ಆಸಕ್ತಿಯಲ್ಲಿ ಅಧ್ಯಯನ ಮಾಡಿದ್ದಾರೆ. ಸಂಗೀತ ಸಾಹಿತ್ಯದ ಒಲವು ಕೂಡ ಇದೆ. ಧಾರ್ಮಿಕ ಚಿಂತನೆ, ಉಪನ್ಯಾಸ, ತಾಳಮದ್ದಳೆ, ಸಂಗೀತ ಇವರ ನೆಚ್ಚಿನ ಹವ್ಯಾಸಗಳು. ‘ನಿಷ್ಕಾಮ’ ಎಂಬ ಕೃತಿಯನ್ನು ರಚಿಸಿದ್ದಾರೆ.