ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಎಂಬ ವಿಭಿನ್ನ ಪರಿಕಲ್ಪನೆಯ ಮೂಲಕ ಪರಿಚಿತರಾಗಿರುವ ಸುಭಾಷ್ ಪಾಳೇಕರ್ ಅವರು ವೃತ್ತಿಯಲ್ಲಿ ಕೃಷಿಕರು. ಇವರು ಜನಿಸಿದ್ದು 1949 ಜುಲೈ 1ರಂದು. ಮಹಾರಾಷ್ಟ್ರ ರಾಜ್ಯ, ವಿದರ್ಭ ಪ್ರದೇಶದ ಒಂದು ಪುಟ್ಟ ಹಳ್ಳಿಯಲ್ಲಿ ಜನಿಸಿದರು. ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಕೃಷಿ ಪದವಿ ಪಡೆದಿರುವ ಇವರು ಕಾಲೇಜು ದಿನಗಳಲ್ಲಿ ಸ್ಯಾಟ್ಪುಡಾ ಬುಡಕಟ್ಟು ಜನರೊಂದಿಗೆ ಕೆಲಸ ಮಾಡುತ್ತಿದ್ದರು. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಪದ್ದತಿಯ ಕುರಿತು ಕೃತಿಯನ್ನು ರಚಿಸಿರುವ ಇವರಿಗೆ ಪದ್ಮಶ್ರಿ ಪ್ರಶಸ್ತಿ ದೊರೆತಿದೆ.