ಸಿದ್ಧಲಿಂಗಯ್ಯ ಬಿ. ಕುಲಕರ್ಣಿ ಅವರು ಧಾರವಾಡದ ಕಮಲಾಬಾಯಿ-ಬಸವಣ್ಣೆಪ್ಪ ದಂಪತಿಯ ಪುತ್ರರು. ಧಾರವಾಡದ ಸೇಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರೈಸಿ, ಕರ್ನಾಟಕ ಕಾಲೇಜಿನಲ್ಲಿ ಬಿ.ಕಾಂ. ಪದವೀಧರ. ಸಂಗ್ಯಾ-ಬಾಳ್ಯಾ (1992), ಸೂಪರ್ ನೋವಾ (1993) ಹಾಗೂ ನಿಘಾತ (1995) ಚಲನಚಿತ್ರಗಳಲ್ಲಿ ನಟನೆ, ಅಣ್ಣ ಬಸವಣ್ಣ ’ಈ- ಟಿವಿ’ಯ ಧಾರಾವಾಹಿಯಲ್ಲಿ (2001) ಸಹಾಯಕ ನಿರ್ದೇಶಕರು. ಸದ್ಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ.
ಮೊದಲ ಕೃತಿ: ಷಟ್ ಸ್ಥಳ ಚಕ್ರವರ್ತಿ ಶ್ರೀ ಚೆನ್ನಬಸವಣ್ಣನವರ ಸಾರಥ್ಯದಲ್ಲಿ ಕಲ್ಯಾಣದಿಂದ ಉಳಿವಿಗೆ’ ಹಾಗೂ ಎರಡನೇ ಕೃತಿ ; ಜೀವನವಿದು ಸೋಪಾನ’ ಕಥಾ ಸಂಕಲನ ಪ್ರಕಟವಾಗಿದೆ.