ಲೇಖಕ ಶ್ಯಾಮೇಶ್ ಅತ್ತಿಗುಪ್ಪೆ ಅವರು ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯವರು. ತಂದೆ ಮರಿಸಿದ್ದೇಗೌಡ, ತಾಯಿ ನಂಜಮ್ಮ. ಎಂ.ಎ, ಬಿ.ಎಡ್. ಹಾಗೂ ಪಿ.ಎಚ್.ಡಿ. ಪದವೀಧರರು. ವೃತ್ತಿಯಲ್ಲಿ ಅಧ್ಯಾಪಕ, ಪ್ರವೃತ್ತಿಯಿಂದ ಬರಹಗಾರರು. ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿ ಸಾಂಸ್ಕೃತಿಕ ಪರಿಚಾರಕರಾಗಿ, ಸಂಘಟಕರಾಗಿ ಪರಿಚಿತರು. ಕಥೆ, ಕವನ, ಅಂಕಣ, ವ್ಯಕ್ತಿಚಿತ್ರ, ಸಾಂದರ್ಭಿಕ ಲೇಖನಗಳ ರಚನೆಯಲ್ಲಿ ಅಸಕ್ತಿ. ತೀರ್ಥೇಶ್ವರ ಅಂಕಿತನಾಮದೊಂದಿಗೆ ಆಧುನಿಕ ವಚನಗಳನ್ನು ರಚಿಸಿದ್ದಾರೆ. ಆಂಗ್ಲ ಮತ್ತು ಹಿಂದಿ ಭಾಷೆಯ ಖ್ಯಾತನಾಮರ ಕೃತಿಗಳನ್ನು ಭಾಷಾಂತರಿಸಿದ್ದಾರೆ.
ಕೃತಿಗಳು; ಕೃಷ್ಣರಾಜಪೇಟೆ ತಾಲ್ಲೂಕು ವೈಭವ, ಮೇಷ್ಟ್ರಾಯಣ, ವಿಜ್ಞಾನಿ ಲೋಕ, ಮರೆಯಲಾಗದ ಮಹಾನುಭಾವ ಮಹಾತ್ಮ ಗಾಂಧಿ, ಸ್ನೋವೈಟ್ ಮತ್ತು ಇತರೆ ಗೀತೆಗಳು (ಕಥನ ಕವನಗಳ ಸಂಗ್ರಹ), ಎಡಿಸನ್ ಬಂದ ಬೆಳಕು ತಂದ (ವಿಜ್ಞಾನ ಗೀತೆಗಳ ಸಂಗ್ರಹ).