About the Author

ಲೇಖಕ ಶ್ರೀ ರೇವಣಸಿದ್ದಯ್ಯ ಹಿರೇಮಠ ಅವರು ಮೂಲತಃ ಕಲ್ಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಗಡಿ ಪ್ರದೇಶದ ಕಲ್ಲೂರ ಗ್ರಾಮದವರು. 1975ರ 01 ಜೂನ್ ರಂದು ಜನನ. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದರು. ನಂತರದಲ್ಲಿ ಗದುಗಿನ ಗಾನಯೋಗಿ ಸಾಹಿತ್ಯ ಸಂಗೀತ ಬ್ರಹ್ಮ ಗಾದೆ ಯೋಗಿ ಶಿವಯೋಗಿ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಗುರುಕುಲದ ಪದ್ಧತಿಯಲ್ಲಿ ಸುಮಾರು 12 ವರ್ಷಗಳ ಪರ್ಯಂತರ ಅವರ ಶಿಷ್ಯತ್ವ ವಹಿಸಿದರು. ಈ ವೇಳೆಯಲ್ಲಿ ಸಂಗೀತ ಮತ್ತು ಸಾಹಿತ್ಯದಲ್ಲಿ ಮಾತ್ರವಲ್ಲದೇ ವಿವಿಧರಂಗಗಳಾದ ನಾಟಕ, ಪುರಾಣ, ಪ್ರವಚನ, ಸಂಗೀತ, ಸಾಹಿತ್ಯ ,ವಿವಿಧ ಪ್ರಕಾರದ ಸಾಂಸ್ಕೃತಿಕ ಲೋಕದ ಸರದಾರರಾದರು. ಪ್ರಸ್ತುತ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2003ರಲ್ಲಿ ಗಾನಯೋಗಿ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಂಘ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಸಂಸ್ಥೆಯ ವತಿಯಿಂದ ಪ್ರತಿ ವರ್ಷ ಮಾರ್ಚ್ 03ನೇ ದಿನಾಂಕದಂದು ಪದ್ಮಭೂಷಣ ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ಜಯಂತಿ ಹಾಗೂ ಸಂಘದ ವಾರ್ಷಿಕೋತ್ಸವ ನಿಮಿತ್ಯವಾಗಿ ನಾಡಿನ ಅನೇಕ ಸಂಗೀತ ಸಾಹಿತ್ಯ ದಿಗ್ಗಜರಿಗೆ ಪ್ರಶಸ್ತಿ ಪುರಸ್ಕಾರಗಳಾದ "ವಿಶ್ವಗಾನ ಉಭಯರತ್ನ," " ಪುಟ್ಟರಾಜ ಸಾಹಿತ್ಯ ಸೇವಾ ರತ್ನ ", ಪರಿಸರವಾದಿಗಳಿಗೆ " ವೃಕ್ಷಪೋಷಕರ ರತ್ನ", ಮತ್ತು " ಸಂಗೀತ ಸಾಹಿತ್ಯ ಪೋಷಕ ರತ್ನ" ಪ್ರಶಸ್ತಿಗಳನ್ನು ನೀಡುತ್ತಾ ಬಂದಿದೆ.

ಕೃತಿಗಳು: ಶ್ರೀ ಗುರು ವಚನಾಮೃತ, ಆಧುನಿಕ ವಚನಗಳ ಪುಸ್ತಕ, ಪುಟ್ಟರಾಜ ಗುರುಗಳ ಭಕ್ತಿಗೀತೆ, ಶಿವಶರಣರ ಗೀತೆ. ಹೀಗೆ ಸುಮಾರು ನೂರಕ್ಕೂ ಅಧಿಕ ಸ್ವಾರಚಿತ ಕವನಗಳು ಅಧಿಕ ಆಧುನಿಕ ವಚನಗಳು.

ಪ್ರಶಸ್ತಿಗಳು: ರೇಣುಕ ಶ್ರೀ ಪ್ರಶಸ್ತಿ (ಬೆಳಗಾವಿ), ಶ್ರೀ ಚನ್ನರತ್ನ ಪ್ರಶಸ್ತಿ ಮತ್ತು ಚೆನ್ನಶ್ರೀ ಪ್ರಶಸ್ತಿ (ಹಿರೇಮಠ ಸಂಸ್ಥಾನ ಹಾರಕೂಡ), ಶ್ರೀ ಪಂಚಾಕ್ಷರ ಕೃಪಾಭೂಷಣ ಪ್ರಶಸ್ತಿ(ಬೆಂಗಳೂರು), ಪುಟ್ಟರಾಜ ಕೃಪಾಭೂಷಣ ರಾಷ್ಟ್ರಪ್ರಶಸ್ತಿ (ಗದಗ), ಗಾನ ಸಿಂಚನ ಪ್ರಶಸ್ತಿ (ಯಾದಗಿರಿ), ಸಂಗೀತ ರತ್ನ ಪ್ರಶಸ್ತಿ (ಹುಬ್ಬಳ್ಳಿ ಧಾರವಾಡ), ಕರ್ನಾಟಕ ಕಣ್ಮಣಿ ಪ್ರಶಸ್ತಿ (ಅಫಜಲಪುರ), ಗಾನರತ್ನ ಪ್ರಶಸ್ತಿ (ಕಲ್ಬುರ್ಗಿ), ಸಾಧಕ ರತ್ನ ಪ್ರಶಸ್ತಿ (ಚಿಂಚೋಳಿ), ವಿನಾಯಕ ವರದಾಯಕ ಪ್ರಶಸ್ತಿ (ಚಿಂಚೋಳಿ), ಕುಮಾರ ಶ್ರೀ ಪ್ರಶಸ್ತಿ (ಗದಗ) ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಶ್ರೀ ರೇವಣಸಿದ್ದಯ್ಯ ಹಿರೇಮಠ

(01 Jun 1975)