ಲೇಖಕ, ಪ್ರಾಧ್ಯಾಪಕ ಶಿವಾನಂದ ಯಲ್ಲಪ್ಪ ಗುಬ್ಬಣ್ಣವರ ಅವರು ಮೂಲತಃ ಕುಂದಗೋಳ ತಾಲ್ಲೂಕು ಹಿರೇನರ್ತಿ ಗ್ರಾಮದವರು. ಹುಟ್ಟಿದ್ದು 1946 ಜನವರಿ 01. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಲುಮತ ಸಮಾಜ ಸಂಸ್ಕೃತಿ ಚರಿತ್ರೆಯನ್ನು ನಿರೂಪಿಸುವ ಮೌಖಿಕ ರೂಪದ ಡೊಳ್ಳಿನ ಹಾಡುಗಳನ್ನು ಜನಪದರಿಂದ ಸಂಗ್ರಹಿಸಿ ಅವರು "ದೇವರ್ ಬಂದಾವ್ ಬನ್ನಿರೇ" ಶೀರ್ಷಿಕೆಯಡಿ ಎರಡು ಸಂಪುಟದಲ್ಲಿ ಪ್ರಕಟಿಸಿದ್ದರು. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ ಸಂದಿದ್ದು ಬರಕೋ ಪದ ಬರಕೊ (ಸಂಪಾದನೆ), ರಾಮೋಜೋಯಿಸರ ಕಾಳಗ, ಶಿಶುನಾಳ ಶರೀಫರ ಪದಗಳು (410 ಹಾಡುಗಳಸಂಗ್ರಹ) - ಅವರ ಪ್ರಮುಖ ಕೃತಿಗಳು. ಅವರು 2020 ಜುಲೈ 25ರಂದು ನಿಧನ ಹೊಂದಿದರು.