ಸಾಮಾಜಿಕ ಜವಾಬ್ದಾರಿಯುಳ್ಳ ಪ್ರತಿಯೊಬ್ಬ ಪತ್ರಕರ್ತನಿಗೂ ಸರ್ವರಿಗೂ ಒಳಿತನ್ನೇ ಮಾಡಬೇಕು ಎಂಬ ಹಂಬಲವಿರುತ್ತದೆ. ಅಂತಹ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವವರು ಸನ್ಮಿತ್ರ ಶಿವಮೂರ್ತಿ ಜುಪ್ತಿಮಠ. ವಿಶ್ವನಾಥ-ಶಾಂತಾ ದಂಪತಿ ಪುತ್ರರಾದ ಇವರು, 1976ರ ಅಕ್ಟೋಬರ್ 20ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದ್ದಾರೆ. ಕನ್ನಡ ಎಂಎ, ಶಾಸನ, ಪತ್ರಿಕೋದ್ಯಮ, ಸಂಸ್ಕೃತ ಸಾಹಿತ್ಯ, ವೇದಾಧ್ಯಯನ ಮಾಡಿದ್ದು, ಇವರ ಬರವಣಿಗೆಗೆ ನೆರವಾಗಿವೆ.
ಸಕ್ಕರೆ ಉದ್ಯಮದ ಸಿಹಿ-ಕಹಿ, ಅರವತ್ತಾದೃಏನು? ಕೃತಿಗಳು ಈಗಾಗಲೇ ಬಿಡುಗಡೆಗೊಂಡು ರುಕ್ಮಿಣಿಬಾಯಿ ಸ್ಮಾರಕ ರಾಜ್ಯ ಪ್ರಶಸ್ತಿ, ಜೇಡರ ದಾಸಿಮಯ್ಯ ರಾಜ್ಯ ಪ್ರಶಸ್ತಿಗೆ ಪಾತ್ರವಾಗಿವೆ. ಅರಣ್ಯ ರಕ್ಷಣೆ ಕುರಿತ ವರದಿ, ನಲುಗಿದ ಕುಕ್ಕರಹಳ್ಳಿ ಕೆರೆ ವರದಿಗಳಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯ ಪ್ರಶಸ್ತಿ, ಮುರಗೋಡು ಮಹಾಂತಸ್ವಾಮಿಗಳ ಮಠದ ಮುರಗೋಡು ಮುಕುಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.