ಲೇಖಕ ಡಾ. ಶರಣಪ್ಪ ಚಲವಾದಿ ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹಿರೇ ರಾಯಕುಂಪಿ ಗ್ರಾಮದವರು. ಗುಲಬರ್ಗಾ ವಿ.ವಿ.ಯಿಂದ ಎಂ.ಎ. ಪಿಎಚ್ ಡಿ ಪದವೀಧರರು ಹಾಗೂ ಬಿ.ಇಡಿ ಪದವೀಧರರು. ಇದೇ ವಿ.ವಿ.ಯ ರಾಯಚೂರು ಕೇಂದ್ರದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿದ್ದಾರೆ. ರಾಯಚೂರು ಜಿಲ್ಲೆಯ ದಲಿತ ಸಾಹಿತ್ಯ ಎಂಬುದು ಸಂಶೋಧನಾ ಮಹಾಪ್ರಬಂಧ. ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ಲೇಖನಗಳು ಪ್ರಕಟವಾಗಿವೆ.
ಕೃತಿಗಳು: ಬುದ್ಧ ಭೂಮಿ (ಕವನ ಸಂಕಲನ), ದಲಿತ ಸಾಹಿತ್ಯಾವಲೋಕನ (ಸಂಶೋಧನಾ ಲೇಖನಗಳ ಸಂಗ್ರಹ)
ಪ್ರಶಸ್ತಿಗಳು: ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬೆಂಗಳೂರಿನ ನಿತ್ಯೋತ್ಸವ ಸಾಮಾಜಿಕ ಸಾಂಸ್ಕೃತಿಕ ಸಂಘದಿಂದ ರಾಷ್ಟ್ರೀಯ ಭೂಷಣ ಪ್ರಶಸ್ತಿ ಲಭಿಸಿದೆ.