ಹಿರಿಯ ಶಂಭು ಶರ್ಮಾ ನಾಜಗಾರ ಅವರು ಸಂಸ್ಕೃತ ವಿದ್ವಾಂಸರು. iಇವರ ಜೀವಿತಾವಧಿ 1900 ರಿಂದ 1980ರವರೆಗೆ. ಕಲ್ಯಾಣ (ಹಿಂದಿ ಪತ್ರಿಕೆ), ಕೇಸರಿ, ಕರ್ಮವೀರ, ಸಂಯುಕ್ತ ಕರ್ನಾಟಕ ಹೀಗೆ ನಾಡಿನ ವಿವಿಧ ಪತ್ರಿಕೆಗಳಿಗೆ ಅಂಕಣಗಳು ಮಾತ್ರವಲ್ಲ ಧಾರ್ಮಿಕತೆಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದರು. ಧರ್ಮಸಿಂಧು ಎಂಬ ಶೀರ್ಷಿಕೆಯಡಿ ಹಿಂಧೂಧರ್ಮದ ಸಾರವನ್ನು ಸರಳ ಕನ್ನಡಕ್ಕಿಳಿಸಿ ಕೃತಿ ರಚಿಸಿದ್ದು, ರಾಜ್ಯ ಪ್ರಶಸ್ತಿ ಪಡೆದಿದೆ. ಶೃಂಗಾರ ಎಂಬ ತ್ರೈಮಾಸಿಕವನ್ನು ನಡೆಸುತ್ತಿದ್ದರು. ದ.ರಾ. ಬೇಂದ್ರೆ, ಅ.ನ.ಕೃ. ಕೃಷ್ಣಮೂರ್ತಿ ಪುರಾಣಿಕ, ಬಿ. ಎಚ್. ಶ್ರೀಧರ, ಜಿ. ಆರ್. ಪಾಂಡೇಶ್ವರ ಇತರ ಸಾಹಿತಿಗಳ ಬರಹಗಳನ್ನು ಈ ಮಾಸಿಕದಲ್ಲಿ ಪ್ರಕಟಿಸಲಾಗಿದೆ.
ಕೃತಿಗಳು: ಧರ್ಮಸಿಂಧು ,( ಸಂಸ್ಕೃತದಲ್ಲಿರುವ ಹಿಂದೂ ಧರ್ಮಸಾರವನ್ನು ಕನ್ನಡಕ್ಕೆ ಅನುವಾದಿತ), ಆಚಾರ್ಯ ವಿಧಿಃ,