ಸರ್ವಮಂಗಳ ಜಯರಾಂ ಅವರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಅರಳಾಪುರ ಗ್ರಾಮದಲ್ಲಿ ಜನಿಸಿದವರು. ಇವರು ಎಂ.ಎ. ಬಿ.ಎಡ್ ಪದವೀಧರರಾಗಿದ್ದು ಪ್ರಸ್ತುತ ಗೌರಿಬಿದನೂರಿನ SSEA ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರವೃತ್ತಿಯಲ್ಲಿ ಇವರು ಕವಿಗಳಾಗಿ, ಲೇಖಕರಾಗಿ, ಹಾಗೂ ಹಲವಾರು ಪತ್ರಿಕೆಗಳಲ್ಲಿ ಅಂಕಣಕಾರರಾಗಿ ಗುರ್ತಿಸಿಕೊಂಡಿದ್ದಾರೆ. ಇವರ ಪ್ರಥಮ ಕವನ ಸಂಕಲನ "ಕಾವ್ಯ ಕುಸುರಿ" ಯು 2020 ರಲ್ಲಿ ಲೋಕಾರ್ಪಣೆಗೊಂಡಿದೆ. ಇವರ ಎರಡನೆಯ ಕೃತಿ "ಕಥಾ ಸಿರಿ" ಕಥಾ ಸಂಕಲನವು ಇತ್ತೀಚೆಗೆ ಲೋಕಾರ್ಪಣೆಗೊಂಡಿದೆ.
ಇವರಿಗೆ ಸಾಹಿತ್ಯೋತ್ಸವ ಪ್ರಶಸ್ತಿ, ಯೋಗಿ ನಾರೇಯಣ ಪ್ರಶಸ್ತಿ, ವಾಗ್ಧೇವಿಯ ವರಪುತ್ರಿ ಪ್ರಶಸ್ತಿ... ಹೀಗೆ ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಸೇವೆಗೆ ಸಂದ ಗೌರವವಾಗಿವೆ. ಹಲವಾರು ರಾಜ್ಯ ಮಟ್ಟದ ಕವಿಗೋಷ್ಠಿ ಗಳಲ್ಲಿ, ಸಾಹಿತ್ಯಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದರ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಹೆಸರಾಗಿದ್ದಾರೆ.